ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಕುಂಜೆ:ಮಕ್ಕಳನ್ನು ರಾಷ್ಟ್ರದ ಉತ್ತಮ ಪ್ರಜೆಗಳನ್ನಾಗಿ ಮಾಡಲು ಶಿಕ್ಷಕರ ಸೇವೆ ಅನನ್ಯ

ಮುಲ್ಕಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 35 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಹೆಲೆನ್ ರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಕುಂಜೆ ಸಂತ ಪೌಲರ ದೇವಾಲಯ ಗುರುಗಳಾದ ಫಾ.ಗಿಲ್ಬರ್ಟ್ ಡಿಸೋಜಾ ವಹಿಸಿ ಮಾತನಾಡಿ ಮಕ್ಕಳನ್ನು ರಾಷ್ಟ್ರದ ಉತ್ತಮ ಪ್ರಜೆಗಳನ್ನಾಗಿ ಮಾಡಲು ಶಿಕ್ಷಕರ ಪಾತ್ರ ಅನನ್ಯ ಎಂದರು. ಕಳೆದ ಹಲವಾರು ವರ್ಷಗಳಿಂದ ಶಾಲೆಯಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕಿ ಹೆಲೆನ್ ಸಾಧನೆಯ ಅಭಿನಂದನೀಯ ಎಂದರು.

ಮಂಗಳೂರು ದರ್ಮ ಪ್ರಾಂತ್ಯದ ಚಾನ್ಸಿಲರ್ ಫಾ. ವಿಕ್ಟರ್ ಜಾರ್ಜ್, ಬೆಥನಿ ಸಂಸ್ಥೆಯ ಶಿಕ್ಷಣ ಸಂಯೋಜಕಿ ಸಿ.ಶುಭ. ಸಿ.ವೆನಿಷಾ,ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾಪೂಂಜ ಐಕಳ ಪೋಂಪೈ ಕಾಲೇಜಿನ ಉಪನ್ಯಾಸಕ ಲಾರೆನ್ಸ್ ಸಿಕ್ವೇರ. ಮುಂಬೈ ಉದ್ಯಮಿ ವಿರಾರ್ ಶಂಕರ ಶೆಟ್ಟಿ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷೆ ಡಾ. ಪ್ರೀಡಾ ರೊಡ್ರಿಗಸ್, ಸನ್ಮಾನ ಸಮಿತಿಯ ಅಧ್ಯಕ್ಷರಾದ ಡೆನಿಸ್ ಡಿಸೋಜ ಶಾಲಾ ಮುಖ್ಯೋಪಾಧ್ಯಾಯ ಸುಕುಮಾರ್ ಎನ್, ಉದಯರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಹೆಲೆನ್ ವಿಕ್ಟರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಎಸ್. ಡಿ.ಎಂ.ಸಿ ಅಧ್ಯಕ್ಷ ದಿನಕರ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ನೆಲ್ಸನ್ ಲೋಬೋ ಧನ್ಯವಾದ ಅರ್ಪಿಸಿದರು.

Edited By : PublicNext Desk
Kshetra Samachara

Kshetra Samachara

18/09/2022 07:12 am

Cinque Terre

2.24 K

Cinque Terre

1

ಸಂಬಂಧಿತ ಸುದ್ದಿ