ಬೈಂದೂರು: ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರ್ಕಾರೀ ಪ್ರೌಢ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ವಾಲೀಬಾಲ್ ಪಂದ್ಯಾಟದಲ್ಲಿ ಶಾಲಾ ಕೊಠಡಿಯೊಳಗೆ ನಿಯಮ ಮೀರಿ ಶಿಕ್ಷಕರು ಭಾರೀ ಬಾಡೂಟ ಮಾಡಿದ್ದಲ್ಲದೇ ವಿದ್ಯಾರ್ಥಿಗಳಿಗೆ ಮಾತ್ರ ಮಾಮೂಲಿ ಬಿಸಿಯೂಟ ನೀಡಿ ತಾರತಮ್ಯ ನಡೆಸಿರುವುದು ಹಾಗು ನಿಯಮ ಮೀರಿ ವರ್ತಿಸಿರುವ ಪ್ರಕರಣವನ್ನು ತನಿಖೆ ನಡೆಸಲಾಗುವುದಿ ಎಂದು ಉಡುಪಿ ಜಿಲ್ಲಾ ಉಪನಿರ್ದೇಶಕ ಎನ್.ಕೆ ಶಿವರಾಜ್ ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.
ಘಟನೆಯು ಗಂಭೀರವಾಗಿದ್ದು, ಈ ಬಗ್ಗೆ ಇ.ಒ. (ಎಕ್ಸಿಕ್ಯೂಟಿವ್ ಆಫೀಸರ್) ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಶಾಲಾ ಕೊಠಡಿಯೊಳಗೆ ಮಾಂಸಾಹಾರದ ಬಾಡೂಟ ನಡೆಸಿದ್ದು ತಿಳಿದು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹೆಸರಲ್ಲಿ ಮೂರೂವರೆ ಲಜ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ನಿಯಮ ಮೀರಿ ಶಾಲಾ ಕೊಠಡಿಯೊಳಗೆ ಚಿಕನ್ ಕಬಾಬ್, ಕುಂದಾಪ್ರ ಚಿಕನ್, ಕೊಟ್ಟೆ ಕಡುಬು, ಫ್ರಾನ್ಝ್ ಸಾರು, ಮೀನು ಮಸಾಲಾ ಹೀಗೆ ದೇಣಿಗೆ ಹಣದಲ್ಲಿ ಮೋಜು ಮಸ್ತಿ ಮಾಡಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಪಬ್ಲಿಕ್ ನೆಕ್ಸ್ಟ್ ಜೊತೆ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದು, ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.
Kshetra Samachara
15/09/2022 07:52 pm