ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೊಂಕಣಿ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಪಠ್ಯಕ್ರಮ ರಚನೆ; ಡಾ‌.ಕೆ.ಜಗದೀಶ್ ಪೈ

ಮಂಗಳೂರು: ಶಾಲಾ - ಕಾಲೇಜುಗಳಲ್ಲಿ ಕೊಂಕಣಿ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಪಠ್ಯಕ್ರಮ ರಚನೆಯಾಗುತ್ತಿದೆ. ಈಗಾಗಲೇ ಪಠ್ಯಪುಸ್ತಕ ತಯಾರಿಗೆ ಸಮಿತಿ ರಚನೆಯಾಗಿದ್ದು, ಸಮಿತಿ ಪಠ್ಯಕ್ರಮ ಸಿದ್ಧಪಡಿಸುತ್ತದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ‌.ಕೆ.ಜಗದೀಶ್ ಪೈ ಹೇಳಿದರು.

ಈ ಬಗ್ಗೆ ನಗರದ ಖಾಸಗಿ ಹೋಟೆಲೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೊಸ ಶಿಕ್ಷಣ(ಎನ್ಇಪಿ) ನೀತಿಯಡಿ ಕೊಂಕಣಿ ಕೇಂದ್ರ ಸರಕಾರವು ಕೊಂಕಣಿ ಮಾಧ್ಯಮದಲ್ಲಿ ಕಲಿಸಲು ಅವಕಾಶ ನೀಡಿದೆ. ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಎರಡು ಬಾರಿ ಸಿಎಂ, ಶಿಕ್ಷಣ ಮಂತ್ರಿಯವರನ್ನು ಭೇಟಿ ಮಾಡಿದ್ದೇವೆ. ಆದರೆ ಕೊಂಕಣಿ ಮಾಧ್ಯಮದಲ್ಲಿ ಕಲಿಕೆಗೆ ವಿದ್ಯಾರ್ಥಿಗಳ ಕೊರತೆಯಿದೆ ಎಂಬ ಉತ್ತರ ಬಂದಿತ್ತು.

ಇತ್ತೀಚೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೊಂಕಣಿ ಮಾಧ್ಯಮದಲ್ಲಿ‌ ಶಿಕ್ಷಣ ಕೊಡಲು ಪಠ್ಯಕ್ರಮ ಸಿದ್ಧಪಡಿಸಿ ತಂದಲ್ಲಿ ಆ ಬಳಿಕ‌ ಕೊಂಕಣಿ ಮಾಧ್ಯಮ ಜಾರಿಯ ಬಗ್ಗೆ ಚಿಂತನೆ‌ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಕೊಂಕಣಿ ಪಠ್ಯಪುಸ್ತಕ ಸಿದ್ಧವಾಗುತ್ತಿದೆ ಎಂದು ಹೇಳಿದರು.

ಪಠ್ಯಕ್ರಮ ಸಿದ್ಧವಾದ ತಕ್ಷಣ ಶಿಕ್ಷಣ ಸಚಿವರನ್ನು ಭೇಟಿಯಾಗುತ್ತೇವೆ‌. ಅವರು ಈ ಪಠ್ಯಪುಸ್ತಕವನ್ನು ಒಪ್ಪಿದ್ದಲ್ಲಿ ಮುಂದಿನ ವರ್ಷದಿಂದ ಕೊಂಕಣಿ ಮಾಧ್ಯಮ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಅಲ್ಲದೆ ಕೊಂಕಣಿ ಎಂಎ ಪೂರೈಸಿವರಿಗೆ ಉದ್ಯೋಗ ಸೃಷ್ಟಿಯಾಗಬೇಕೆಂದು ಸರಕಾರಕ್ಕೆ ಮನವಿ ನೀಡಿದ್ದೇವೆ. ಈ ಮೂಲಕ ಕೊಂಕಣಿ ಕಲಿಕೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತದೆ‌.

ಅದಕ್ಕಾಗಿ ಸರಕಾರ ಕೊಂಕಣಿ ಭಾಷೆಯಲ್ಲಿ ನುರಿತರಿಂದ ಕಲಿಕೆಗೆಂದು ಐದು ವರ್ಷಗಳ ಕಾಲ ಸಡಿಲಿಕೆ ಮಾಡಬೇಕು. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ ಎಂಎ ಮುಗಿಸಿದ ಸಾಕಷ್ಟು ಜನ ಶಿಕ್ಷಕರು ತಯಾರಾಗಲಿದ್ದಾರೆ. ಇದರಿಂದ ಕೊಂಕಣಿ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸುಲಭವಾಗುತ್ತದೆ ಎಂದು ಡಾ‌.ಕೆ.ಜಗದೀಶ್ ಪೈ ಹೇಳಿದರು.

Edited By : Shivu K
Kshetra Samachara

Kshetra Samachara

10/09/2022 03:33 pm

Cinque Terre

11.57 K

Cinque Terre

1

ಸಂಬಂಧಿತ ಸುದ್ದಿ