ಉಡುಪಿ: ವೈದ್ಯಕೀಯ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕರ್ನಾಟಕದ ಉಡುಪಿಯ ವಿದ್ಯಾರ್ಥಿ ವೃಜೇಶ್ ವೀಣಾಧರ್ ಶೆಟ್ಟಿ 13ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಆದರೆ ವೃಜೇಶ್ ವೀಣಾಧರ್ ನಮ್ಮ ವಿದ್ಯಾರ್ಥಿ ಎಂದು ಎರಡು ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ಗಳು ಕಿತ್ತಾಟ ನಡೆಸಿವೆ.
ಹೌದು. ಬೇಸ್ ಹಾಗೂ ಆಕಾಶ್ ಕೋಚಿಂಗ್ ಸೆಂಟರ್‌ಗಳು ವೃಜೇಶ್ ವೀಣಾಧರ್ ಶೆಟ್ಟಿ ತಮ್ಮ ವಿದ್ಯಾರ್ಥಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿವೆ. ನೀಟ್‌ನಲ್ಲಿ 13ನೇ ರ‍್ಯಾಂಕ್ ಪಡೆದಿರುವ ವೃಜೇಶ್ ಹಾಗೂ 547ನೇ ರ‍್ಯಾಂಕ್ ಪಡೆದಿರುವ ವೃಶಾನ್ ಮಣಿಪಾಲದಲ್ಲಿ ಫೈನಾನ್ಷಿಯಲ್ ಕನ್ಸಲ್ಟೆಂಟ್ ಆಗಿರುವ ವೀಣಾಧರ್ ಶೆಟ್ಟಿ ಹಾಗೂ ಗೃಹಿಣಿ ರೇಖಾ ಶೆಟ್ಟಿ ದಂಪತಿಯ ಅವಳಿ ಪುತ್ರರಾಗಿದ್ದಾರೆ.
ಇಬ್ಬರೂ ಸಹೋದರರು ಐದು ವಿಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯ ನಾಲ್ಕು ವಿಭಾಗಗಳಲ್ಲಿ ಒಟ್ಟು 7 ರ‍್ಯಾಂಕ್‌ಗಳನ್ನು ಪಡೆದಿದ್ದರು. ಈ ವೇಳೆ ಮಾತನಾಡಿದ್ದ ವೃಜೇಶ್, ನೀಟ್ ಮತ್ತು ಸಿಇಟಿಗಾಗಿ ತಾವು ಉಡುಪಿಯ ಬೇಸ್‌ನಲ್ಲಿ ಕೋಚಿಂಗ್ ಪಡೆದಿರುವುದಾಗಿ ಹೇಳಿಕೊಂಡಿದ್ದರು.
PublicNext
08/09/2022 12:14 pm