ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಮಹಾವೀರ ಕಾಲೇಜು ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ: ಹಿರಿಯ ನ್ಯಾಯಾಧೀಶರಿಂದ ಸಂಸ್ಥಾಪಕರ ಭಾವಚಿತ್ರಕ್ಕೆ ಮಾಲಾರ್ಪಣೆ

ಮೂಡುಬಿದಿರೆ: ಶಿಕ್ಷಣ ಜ್ಞಾನವನ್ನು ವೃದ್ಧಿಸುವಂತಾಗಬೇಕೇ ಹೊರತು, ಮಾನಸಿಕ ಒತ್ತಡವನ್ನು ಹೇರುವುದಲ್ಲ. ಪದವಿ ಪಡೆದಾಕ್ಷಣ ಶಿಕ್ಷಿತನಾಗುವುದಿಲ್ಲ. ಅದರೊಂದಿಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಶಕ್ತನಾದಾಗ ಶಿಕ್ಷಣಕ್ಕೆ ಬೆಲೆ ಬರುತ್ತದೆ. ಅಧ್ಯಾಪಕರು ಶಿಕ್ಷಣದೊಂದಿಗೆ ಈ ಮೌಲ್ಯಗಳನ್ನು ಕಲಿಸಬೇಕು ಎಂದು ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶ ಜಸ್ಟಿಸ್ ಅಬ್ದುಲ್ ನಝೀರ್ ಹೇಳಿದರು.

ಗುರುವಾರ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ ಹಾಗೂ ಕಾಲೇಜು ದಿನಾಚರಣೆಯಲ್ಲಿ ಸಂಸ್ಥಾಪಕರ ಭಾವಚಿತ್ರಕ್ಕೆ ಮಾಲಾರ್ಪಾಣೆಗೈದು ಪುಷ್ಪಾರ್ಚನೆ ನಡೆಸಿ ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಅಬ್ದುಲ್ ನಝೀರ್ ಅವರ ಪತ್ನಿ ಸಮೀರಾ ನಝೀರ್, ಉದ್ಯಮಿ ಮನೋಹರ್ ಎಸ್. ಮೂಡುಬಿದಿರೆ, ಕಾಲೇಜಿನ ಉಪಾಧ್ಯಾಕ್ಷ ಸಂಪತ್ ಸಾಮ್ರಾಜ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಹಾಗೂ 2021-22ನೇ ಸಾಲಿನಲ್ಲಿ ಬಿ.ಕಾಂನಲ್ಲಿ 9 ನೇ ರ್ಯಾಂ ಕ್ ಗಳಿಸಿದ ಜಸ್ಮಿತಾ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.

ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಡಾ| ಎಸ್.ಪಿ.ಗುರುದಾಸ್ ನಿರೂಪಿಸಿದರು. ಮಾಜಿ ಪ್ರಾಂಶುಪಾಲ ಜೆ.ಜೆ ಪಿಂಟೋ ವಂದಿಸಿದರು.

Edited By :
Kshetra Samachara

Kshetra Samachara

18/08/2022 08:36 pm

Cinque Terre

4.07 K

Cinque Terre

0

ಸಂಬಂಧಿತ ಸುದ್ದಿ