ಕಾಪು: ಇಂದಿನ ಯುವಪೀಳಿಗೆ ದಿನೇ ದಿನೇ ಮಾದಕದ್ರವ್ಯಗಳ ವ್ಯಸನಕ್ಕೀಡಾಗಿ ಅವುಗಳ ದಾಸರಾಗುತ್ತಿದ್ದಾರೆ. ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವಪೀಳಿಗೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಗಸ್ಟ್ 7ರಿಂದ 30ವರೆಗೆ ಕಾಪು ತಾಲೂಕಿನಲ್ಲಿ ಮಾದಕ ವಿರೋಧಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎವಿ. ಬಾಳಿಗ ಮೇಮೊರಿಯಲ್ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ.ಭಂಡಾರಿ ಹೇಳಿದರು.
ಕಾಪು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದೇಶದಲ್ಲಿ 2.21% (2.26ಕೋಟಿ) ಜನ ಮಾದಕ ವಸ್ತುಗಳ ದಾಸರಾಗಿದ್ದಾರೆ. ಇದರಲ್ಲಿ 18 ಲಕ್ಷ ವಯಸ್ಕರು 4.6ಲಕ್ಷ ಮಕ್ಕಳು ತೀವ್ರ ವ್ಯಸನಿಗಳಾಗಿದ್ದಾರೆ. ಸರಕಾರ ಸಂಘ ಸಂಸ್ಥೆಗಳು ಜನರು ಒಂದಾಗಿ ಇದರ ವಿರುದ್ಧ ಸಮರ ಸಾರಬೇಕು. ಅನಕ್ಷರಸ್ಕರಿಗಿಂತ ಹೆಚ್ಚಾಗಿ ವಿದ್ಯಾವಂತರು ಮಾದಕ ವ್ಯಸನಿಗಳಾಗಿ ಮಾರ್ಪಡುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಿ.ವಿ.ಭಂಡಾರಿ, ಯುವಕರು ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಅನ್ವರ್ ಆಲಿ ಕಾಪು, ತಾಲೂಕು ಸಂಚಾಲಕ ರಂಜಾನ್ ಕಾಪು, ಜಿಲ್ಲಾ ಕಾರ್ಯದರ್ಶಿ ನಬೀಲ್ ಗುಜ್ಜರಬೆಟ್ಟು, ಬದ್ರುದ್ದೀನ್, ಫರ್ವೇಝ್ ಉಡುಪಿ, ಮುಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/08/2022 08:47 pm