ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ನಿಶಿತಾ ಜೆವಿಟಾ ಡಿಸೋಜಾ ಅವರಿಗೆ ಡಾಕ್ಟರೇಟ್

ಮಣಿಪಾಲ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮೂಲಕ ಬ್ರಹ್ಮಾವರದ ನಿಶಿತಾ ಜೆವಿಟಾ ಡಿಸೋಜಾ ಅವರು ಮಂಡಿಸಿದ 'ಕರ್ನಾಟಕದ ನದಿ ಅಳಿವೆ ಮಡ್ಡಿದಿಂಡುಗಳಲ್ಲಿರುವ ಭೂರಾಸಾಯನಿಕ ಹಾಗೂ ಐಸೊಟೋಪ್‌ಗಳ ಮುಖಾಂತರ ಗತಕಾಲದ ಜಲಮಾಲಿನ್ಯದ ಅಧ್ಯಯನ' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಡಾಕ್ಟರೇಟ್ ಪದವಿಯನ್ನು ನೀಡಿದೆ.

ಎಂಐಟಿಯ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಎನ್.ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ನಿಶಿತಾ ತಮ್ಮ ಸಂಶೋಧನೆಯನ್ನು ಕೈಗೊಂಡಿದ್ದರು. ಇವರು ಬೆಂಗಳೂರಿನ ರವಿಪ್ರಕಾಶ್ ಹಾಗೂ ಕಮಲಾ ದಂಪತಿಗ ಪುತ್ರಿ ಹಾಗೂ ಬ್ರಹ್ಮಾವರದ ಸಿವಿಲ್ ಇಂಜಿನಿಯರ್ ನವೀನ್ ಡಿಸೋಜ ಅವರ ಪತ್ನಿ.ಇವರು ಸಿದ್ಧಪಡಿಸಿದ ಪ್ರಬಂಧದ ಕೆಲವು ಲೇಖನಗಳು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.

Edited By : PublicNext Desk
Kshetra Samachara

Kshetra Samachara

10/08/2022 02:25 pm

Cinque Terre

1.99 K

Cinque Terre

0

ಸಂಬಂಧಿತ ಸುದ್ದಿ