ಉಡುಪಿ: ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಉದ್ಯಾವರ ಮತ್ತು ರಿಕ್ಷಾ ಚಾಲಕರ ಮತ್ತು ಮಾಲಕರ ಆರೋಗ್ಯ ನಿಧಿ ಕ್ಷೇಮ ನಿಧಿ ಟ್ರಸ್ಟ್ (ರಿ)ಉದ್ಯಾವರ ಇವರ ಆಶ್ರಯದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ 2020-21 ಮತ್ತು 2021-22ರ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು.ಉದ್ಯಾವರದ ಹಫ್ಸಾ ಆಡಿಟೋರಿಯಂನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಒಟ್ಟು 17 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ವಹಿಸಿದರು.ರಿಕ್ಷಾ ಚಾಲಕರ ಆರೋಗ್ಯ ನಿಧಿ ಕ್ಷೇಮ ನಿಧಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಜಯಲಕ್ಷ್ಮಿ, ಜವಳಿ ಮಳಿಗೆ ಮಾಲೀಕರಾದ ಶ್ರೀ ರವೀಂದ್ರ ಹೆಗ್ಡೆ, ಉಡುಪಿ ವಕೀಲ ಸಂಘದ ಅಧ್ಯಕ್ಷ ಬಿ.ನಾಗರಾಜ್ ಮತ್ತು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಕಾನೂನು ಸಲಹೆಗಾರರು ಹಾಗೂ ರಿಕ್ಷಾ ಚಾಲಕರ ಮತ್ತು ಮಾಲಕರ ಆರೋಗ್ಯ ನಿಧಿ ಕ್ಷೇಮ ನಿಧಿ ಟ್ರಸ್ಟ್ ನ ಟ್ರಸ್ಟಿಗಳು ವೀರೇಂದ್ರ ಹೆಗ್ಡೆ ,ಮ್ಯಾನೇಜಿಂಗ್ ಟ್ರಸ್ಟಿಗಳು ಉದ್ಯಮಿಗಳು ಮತ್ತು ಯಶಸ್ವಿ ಫಿಶ್ ಮಿಲ್ ನ ನಿರ್ದೇಶಕರು ಸಾಧು ಸಾಲಿಯಾನ್ ಮ್ಯಾನೇಜಿಂಗ್ ಟ್ರಸ್ಟ್ ಗಳು ಮತ್ತು ಸಮಾಜ ಸೇವಕರಾದ ಕೃಷ್ಣಮೂರ್ತಿ ಆಚಾರ್ಯ ,ಮ್ಯಾನೇಜಿಂಗ್ ಟ್ರಸ್ಟಿಗಳು ಮತ್ತು ಉದ್ಯಮಿಗಳಾದ ಕಿಶೋರ್ ಕನ್ನರ್ಪಾಡಿ, ರಿಕ್ಷಾ ಚಾಲಕರ ಮತ್ತು ಮಾಲಕರ ಆರೋಗ್ಯ ನಿಧಿ ಕ್ಷೇಮ ನಿಧಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಗಳಾದ ಸತೀಶ್ ಸಾಲಿಯನ್
ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷರು ಗಣೇಶ್ ಕೋಟ್ಯಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Kshetra Samachara
18/07/2022 05:16 pm