ಬೈಂದೂರು: ಕಳೆದ ಒಂದು ವಾರದ ವರುಣನ ಆರ್ಭ ಇಂದು ತಣ್ಣಗಾಗಿದೆ.ಜಿಲ್ಲೆಯಲ್ಲಿ ಹತ್ತು ದಿನಗಳ ಬಳಿಕ ಇವತ್ತು ಸೂರ್ಯನ ಬೆಳಕು ಕಾಣಿಸುತ್ತಿದೆ. ಭಾರೀ ವರುಣಾರ್ಭಟಕ್ಕೆ ಈಡಾಗಿದ್ದ ಜಿಲ್ಲೆಯ ಬೈಂದೂರು ಮತ್ತು ಕುಂದಾಪುರ ಭಾಗದಲ್ಲಿ ನದಿಯ ಮಟ್ಟ ನಿಧಾನಕ್ಕೆ ಇಳಿಕೆ ಆಗುತ್ತಿದೆ. ಇಡೀ ಜಿಲ್ಲೆಯಲ್ಲಿ ಸೌಪರ್ಣಿಕಾ ನದಿತೀರದ ಜನ ಸಾಕಷ್ಟು ಸಂಕಷ್ಟ ಪಟ್ಟಿದ್ದರು.
ನದಿ ದಾಟಿ ಹೋಗುವ ನೆರೆ ಇರುವ ಪ್ರದೇಶದ ಮಕ್ಕಳಿಗೆ ಜಿಲ್ಲಾಡಳಿತ ಶಾಲಾ-ಕಾಲೇಜನ್ನು ಕಡ್ಡಾಯ ಮಾಡಿಲ್ಲ. ಈ ಬಗ್ಗೆ ಸ್ಪಷ್ಟ ಆದೇಶವನ್ನು ಹೊರಡಿಸಿದೆ. ಆದರೂ ಬೈಂದೂರಿನ ಸಾಲ್ಬುಡ, ನಾಡ, ಬಡಾಕೆರೆ ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಮುಖ ನೋಡಿ ಒಂದು ವಾರ ಕಳೆದಿತ್ತು.
ಪಂಚಾಯತ್ ಮತ್ತು ಸ್ಥಳೀಯರ ನೆರವಿನಿಂದ ದೋಣಿ ಹತ್ತಿಕೊಂಡು ಮಕ್ಕಳು ಇವತ್ತು ಶಾಲೆಗೆ ಹೋಗಿದ್ದಾರೆ. ಪಶ್ಚಿಮಘಟ್ಟದಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ನದಿಯ ಮಟ್ಟ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.
Kshetra Samachara
12/07/2022 01:18 pm