ಬ್ರಹ್ಮಾವರ : ಮೊನ್ನೆ ಪ್ರಕಟಗೊಂಡ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಸಮವಸ್ತ್ರ ವಿವಾದ ಹೊರತಾಗಿಯೂ ಮುಸ್ಲಿಂ ವಿದ್ಯಾರ್ಥಿನಿಯರು ಉತ್ತಮ ಸಾಧನೆ ತೋರುವ ಮೂಲಕ ವಿದ್ಯೆಗೆ ಪ್ರಾಮುಖ್ಯತೆ ನೀಡಿದ್ದಾರೆ.ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನ ವಿದ್ಯಾರ್ಥಿನಿ ಅನ್ ಶಾಲ್ ಎ.ಕೆ ವಿಜ್ಞಾನ ವಿಭಾಗದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ 572 ಅಂಕ ಗಳಿಸಿ ಶೇ. 95.3% ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈಕೆ ಉಪ್ಪಿನಕೋಟೆಯ ಅಬ್ದುಲ್ ಕರೀಂ, ಶಾಹಿರಾ ಬಾನು ಪುತ್ರಿ
ಇನ್ನು ಹೂಡೆಯ ಸಾಲಿಹಾತ್ ಕಾಲೇಜಿನ ವಿದ್ಯಾರ್ಥಿನಿ ಮರಿಯಮ್ ವಿಮ್ ಶಾ ವಾಣಿಜ್ಯ ವಿಭಾಗದಲ್ಲಿ 571 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ. ಹೆತ್ತವರು ಮತ್ತು ಅಧ್ಯಾಪಕ ವೃಂದದ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ಪಬ್ಲಿಕ್ ನೆಕ್ಸ್ಟ್‌ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ಪ್ರೌಢಶಾಲೆಯ ಆಯಿಷಾ ಅಝ್ವಾ 622 ಅಂಕಗಳಿಸುವ ಮೂಲಕ 99.52 ಶೇ.ಪಡೆದು ಅಗ್ರಸ್ಥಾನಿಯಾಗಿದ್ದಾರೆ. ಈಕೆ ಪಿಯುಸಿಯಲ್ಲಿ ವಿಜ್ಞಾನ ಪಡೆದುಕೊಂಡಿದ್ದು ಮುಂದೆ ಡಾಕ್ಟರ್ ಆಗುವ ಕನಸು ಕಾಣುತ್ತಿದ್ದಾಳೆ.
Kshetra Samachara
24/06/2022 05:12 pm