ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಿಂದ ನಡೆಸಲ್ಪಡುವ ಶಿಕ್ಷಣ ಸಂಸ್ಥೆಗಳಿಗೆ ಕಳೆದ ವರ್ಷ ಆರೂವರೆ ಕೋಟಿ ರೂಪಾಯಿಯಷ್ಟು ಮೊತ್ತವನ್ನು ಖರ್ಚು ಮಾಡಲಾಗಿದ್ದು, ವಿದ್ಯಾದಾನಕ್ಕೆ ದೇವಸ್ಥಾನ ಹೆಚ್ಚಿನ ಮುತುವರ್ಜಿ ವಹಿಸಿದ್ದು, ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಕಟೀಲು ವಿದ್ಯಾಸಂಸ್ಥೆಗಳ ಪ್ರಾಥಮಿಕ, ಪ್ರೌಢ ಹಾಗೂ ಪದವೀಪೂರ್ವ ಕಾಲೇಜುಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭ ಹೆಚ್ಚು ಅಂಕ ಗಳಿಸಿದ ಪ್ರಾಥಮಿಕ ಶಾಲೆಯ ಪ್ರಜ್ವಲ್ ಪೈ, ಸಮೀಕ್ಷಾ, ಪ್ರೌಢಶಾಲೆಯ ಶ್ರೀವರ್ಷಾ ಹೆಗಡೆ, ಪ್ರತೀಕ್ಷಾ, ಸ್ವಸ್ತಿಕ್ ಕೋಟ್ಯಾನ್, ಪಿಯುಸಿಯ ಸ್ವಾತಿ ಶೆಟ್ಟಿ, ಶೋಭಿತಾ ಭಟ್, ಶಶಾಂಕ್, ಎಸ್, ನೇತ್ರಾ ಇವರನ್ನು ಅಭಿನಂದಿಸಲಾಯಿತು.
ಶಾಲೆಗೆ ಕೊಡುಗೆಗಳನ್ನು ನೀಡಿದ ಹಳೆವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ರತ್ನಾಕರ ಶೆಟ್ಟಿ, ರಾಜೇಂದ್ರ ಎಕ್ಕಾರು, ಅಶೋಕ್ ಕೊಂಡೇಲ ಮತ್ತಿತರರು ಅಭಿಪ್ರಾಯಗಳನ್ನು ಮಂಡಿಸಿದರು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಪ್ರಾಚಾರ‍್ಯೆ ಕುಸುಮಾವತಿ, ಉಪಪ್ರಾಂಶುಪಾಲ ಸೋಮಪ್ಪ ಅಲಂಗಾರು, ಇಂಗ್ಲಿಷ್ ಮಾಧ್ಯಮದ ಚಂದ್ರಶೇಖರ ಭಟ್, ನಿವೃತ್ತ ಉಪಪ್ರಾಚಾರ‍್ಯ ಉಮೇಶ ರಾವ್ ಎಕ್ಕಾರು, ಸಾಯಿನಾಥ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್, ಕಾರ‍್ಯದರ್ಶಿ ಮಿಥುನ ಕೊಡೆತ್ತೂರು ಮತ್ತಿತರರಿದ್ದರು.
Kshetra Samachara
19/06/2022 07:41 pm