ಮಂಗಳೂರು: ಪಿಯುಸಿಯಲ್ಲಿ ಟಾಪರ್ ಆಗಿರೋದು ಕಂಡು ಖುಷಿಯಾಗಿದೆ. ಮೊದಲ ಬಾರಿಗೆ ನನಗೆ ನಂಬೋದೇ ಅಸಾಧ್ಯವಾಗಿತ್ತು. ಆದರೆ ಮಾಧ್ಯಮದಲ್ಲಿ ನಾನು ಟಾಪರ್ ಎಂದು ಸುದ್ದಿ ಬಿತ್ತರವಾದ ಬಳಿಕ ನಾನು ಟಾಪರ್ ಎಂದು ಸ್ಪಷ್ಟವಾಯಿತು. ಏಕೆಂದರೆ ನಾನು ಅಷ್ಟೊಂದು ಸಂತೋಷಗೊಂಡಿದ್ದೆ ಎಂದು ರಾಜ್ಯಕ್ಕೆ ಪಿಯುಸಿ ಟಾಪರ್ ಆಗಿರುವ ಇಲ್ಹಾಮ್ ಹೇಳಿದ್ದಾರೆ.
ಹೌದು.. ಇದು ಮಂಗಳೂರಿನ ಸಂತ ಅಲೋಶಿಯಸ್ ಪಿಯುಸಿ ಟಾಪರ್ ಆಗಿರುವ ಇಲ್ಹಾಮ್ ಮಾತು. ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಇಲ್ಹಾಮ್, ಮುಂದೆ ತಾನು ಮಂಗಳೂರಿನ ಯನೆಪೊಯ ಕಾಲೇಜಿನಲ್ಲಿ ಬಿಎಸ್ ಇ ಕ್ಲಿನಿಕಲ್ ಸೈಕಾಲಜಿ ಮಾಡುತ್ತೇನೆಂದು ಹೇಳಿದ್ದಾರೆ.
ಈ ಕ್ಷೇತ್ರದಲ್ಲಿ ತನಗೆ ಆಸಕ್ತಿಯಿದೆ. ಆದ್ದರಿಂದ ನಾನು ಬಿಎಸ್ಇ ಕ್ಲಿನಿಕಲ್ ಸೈಕಾಲಜಿಯನ್ನು ಆಯ್ಕೆ ಮಾಡಿದೆ. ಈಗಾಗಲೇ ನಾನು ರಿಜಿಸ್ಟ್ರೇಷನ್ ಮಾಡಿದ್ದೇನೆ. ಇದು ನಾಲ್ಕು ವರ್ಷಗಳ ಕೋರ್ಸ್. ಮುಂದಕ್ಕೆ ತಾನೋರ್ವ ಉತ್ತಮ ಕ್ಲಿನಿಕಲ್ ಸೈಕಾಲಜಿಸ್ಟ್ ಆಗುವೆ ಎಂಬ ಭರವಸೆ ಇದೆ ಎಂದು ಹೇಳಿದರು.
Kshetra Samachara
18/06/2022 05:35 pm