ಕುಪ್ಪೆಪದವು:ಬೊಳಿಯದಲ್ಲಿರುವ ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಾಜಲಕ್ಷ್ಮಿ ಫ್ರೆಂಡ್ಸ್ ಕ್ಲಬ್ ಬೊಳಿಯ ಇದರ 10 ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ಉದ್ಘಾಟಿಸಿ ಮಕ್ಕಳಿಗೆ ಪುಸ್ತಕ ವಿತರಿಸಿದರು. ರಾಜಲಕ್ಷ್ಮಿ ಫ್ರೆಂಡ್ಸ್ ಇದರ ಅಧ್ಯಕ್ಷರ, ಪದಾಧಿಕಾರಿಗಳ ಮಾದರಿ ಕಾರ್ಯವನ್ನು ಶಾಸಕರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಬಳ್ಳಾಜೆ , ಸದಸ್ಯರಾದ ಶ್ರೀಮತಿ ಪುಷ್ಪಾ ನಾಯ್ಕ್ , ಶ್ರೀ ಪ್ರವೀಣ್ ಆಳ್ವಾ , ಶ್ರೀಮತಿ ಸುಷ್ಮಾ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು , ವಿವಿಧ ಮೋರ್ಚಾದ ಸದಸ್ಯರು , ಪದಾಧಿಕಾರಿಗಳು , ಕೊಳವೂರು 1 ನೇ ಬೂತ್ ನ ಕಾರ್ಯದರ್ಶಿ , ಪದಾಧಿಕಾರಿಗಳು, ಕಾರ್ಯಕರ್ತರು, ಬೊಳಿಯಾ ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
04/06/2022 01:35 pm