ಮೂಡುಬಿದಿರೆ; 2021-22 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಸಾಧಿಸಿದ ಆಳ್ವಾಸ್ ವಿದ್ಯಾರ್ಥಿನಿ ಶ್ರೇಯ ಆರ್ ಶೆಟ್ಟಿ, ರೋಟರಿ ಶಾಲೆಯ ವಿದ್ಯಾರ್ಥಿನಿ ಶ್ರೀಜಾ ಹೆಬ್ಬಾರ್, ಸ್ವಸ್ತಿ ಯವರಿಗೆ ಮೂಡುಬಿದಿರೆ ಪ್ರೆಸ್ ಕ್ಲಬ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮೂಡುಬಿದಿರೆ ವತಿಯಿಂದ ಶಾಲು ಹೊದಿಸಿ ಫಲವಸ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಅಶ್ರಫ್ ವಾಲ್ಪಾಡಿ, ಸದಸ್ಯರಾದ ಸೀತಾರಾಮ್ ಆಚಾರ್, ನವೀನ್ ಸಾಲ್ಯಾನ್, ಪ್ರೇಮಶ್ರೀ ಕಲ್ಲಬೆಟ್ಟು, ಜೈಸನ್ದ್ಯಾ ತಾಕೋಡೆ, ವಿದ್ಯಾರ್ಥಿ ಪೋಷಕರಾದ ರವೀಂದ್ರ ಶೆಟ್ಟಿ ಬಜಗೋಳಿ, ರೂಪ ಆರ್ ಶೆಟ್ಟಿ, ರಾಘವೇಂದ್ರ ಹೆಬ್ಬಾರ್, ಸೌಜನ್ಯ ಉಪಸ್ಥಿತರಿದ್ದರು.
Kshetra Samachara
29/05/2022 08:11 am