ಉಡುಪಿ: ಹಿಜಾಬ್ ಹಕ್ಕು ನಿರಾಕರಣೆ ಹಾಗೂ ಇತರ ಯಾವುದೇ ಕಾರಣಗಳಿಂದಾಗಿ ಕಾಲೇಜಿಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಚಿತ ಆನ್ಲೈನ್ ಶಿಕ್ಷಣದ ವ್ಯವಸ್ಥೆ ಒದಗಿಸಲಿದೆ.
ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿಷಯಗಳ ಬಗ್ಗೆ ತಜ್ಞ ಉಪನ್ಯಾಸಕರು ಆನ್ ಲೈನ್ ಮೂಲಕ ಮೂಲಕ ತರಗತಿ ನಡೆಸಿಕೊಡಲಿದ್ದಾರೆ. ಅಗತ್ಯವಿರುವ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಕುರಿತ ವಿವರಗಳಿಗಾಗಿ ಮೊ.ಸಂ. 9663638666ನ್ನು ಸಂಪರ್ಕಿಸಬಹುದು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೋಟ ಇಬ್ರಾಹೀಂ ಸಾಹೇಬ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
07/03/2022 07:07 pm