ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಪರೀಕ್ಷೆಗೂ ಪ್ರವೇಶ ನಿರಾಕರಣೆ" ಹಿಜಾಬ್ ಹೋರಾಟಗಾರ್ತಿಯ ಟ್ವೀಟ್ !

ಉಡುಪಿ: ಉಡುಪಿಯಲ್ಲಿ ಹಿಜಾಬ್ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಅಲ್ಮಾಸ್ ಎಂಬ ವಿದ್ಯಾರ್ಥಿನಿ ,ನಮಗೆ ಪರೀಕ್ಷೆಗೂ ಪ್ರಾಂಶುಪಾಲರು ಪ್ರವೇಶ ನೀಡಿಲ್ಲ ಎಂದು ಟ್ವೀಟ್ ಮಾಡಿದ್ದಾಳೆ.

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಅಲ್ಮಾಸ್ ಆಕ್ರೋಶ ವ್ಯಕ್ತಪಡಿಸಿದ್ದು, ಟ್ವಿಟ್ಟರ್ ಮೂಲಕ ಕಾಲೇಜು ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾಳೆ.ಇಂದು ನಮಗೆ ಅಂತಿಮ ಪ್ರಾಕ್ಟಿಕಲ್ ಪರೀಕ್ಷೆ ಇತ್ತು.

ನಾವು ವಿಜ್ಞಾನದ ರೆಕಾರ್ಡ್ ಬುಕ್ ಪೂರ್ಣಗೊಳಿಸಿದ್ದೇವೆ‌.ಅಪಾರ ನಿರೀಕ್ಷೆಯೊಂದಿಗೆ ನಾವು ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದೆವು. ನಮ್ಮ ಪ್ರಾಂಶುಪಾಲರು ನಮಗೆ ಪರೀಕ್ಷೆ ಬರೆಯುವ ಅವಕಾಶ ಕೊಡಲಿಲ್ಲ. 5 ನಿಮಿಷದಲ್ಲಿ ಜಾಗ ಖಾಲಿ ಮಾಡದಿದ್ದರೆ ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.

ಅಂದುಕೊಂಡಂತೆ ನಡೆದಿದ್ದರೆ ನಾವು ಲ್ಯಾಬ್ ಪರೀಕ್ಷೆ ಬರೆದು ಮುಗಿಸಬೇಕಿತ್ತು.ಹಿಜಾಬ್ ಕುರಿತಾದ ದ್ವೇಷದಿಂದ ಈ ಪರಿಸ್ಥಿತಿ ನಮಗೆ ಬಂದೊದಗಿದೆ ಎಂದು ಟ್ವೀಟ್ ಮಾಡಿ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಡಿಜಿಪಿ, ಉಡುಪಿ ಡಿಸಿ, ಉಡುಪಿ ಎಸ್ ಪಿ ಗೆ ಟ್ಯಾಗ್ ಮಾಡಿದ್ದಾಳೆ.

Edited By :
PublicNext

PublicNext

28/02/2022 12:34 pm

Cinque Terre

32.62 K

Cinque Terre

5

ಸಂಬಂಧಿತ ಸುದ್ದಿ