ಮುಲ್ಕಿ: ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಿವೃತ್ತ ಪ್ರಾಂಶುಪಾಲ ದಿ.ಸುಬ್ರಾಯ ಹೊಳ್ಳ ಅವರ ನಿಧನಕ್ಕೆ ಸಂತಾಪ ಸಭೆ ನಡೆಯಿತು.
ಸಭೆಯಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿಷ್ಣುಮೂರ್ತಿ ಮಾತನಾಡಿ, ಶಾಲಾ ಪ್ರಾಂಶುಪಾಲರಾಗಿ ಸರಕಾರಿ ಸಂಸ್ಥೆಯ ಏಳಿಗೆಗೆ ದಿ. ಸುಬ್ರಾಯ ಹೊಳ್ಳರ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳಿಗೆ ಶಿಸ್ತು ಬದ್ಧ ಜೀವನ ಕಲಿಸಿದ ಗುರುಗಳಾಗಿದ್ದರು. ಅವರು ವ್ಯಕ್ತಿಯಲ್ಲ ಶಕ್ತಿಯಾಗಿದ್ದರು ಎಂದರು.
ಕಾಲೇಜಿನ ಉಸ್ತುವಾರಿ ಸಮಿತಿ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಮಾತನಾಡಿ, ಸರಕಾರಿ ಶಾಲೆಯಲ್ಲಿ ಸುಬ್ರಾಯ ಹೊಳ್ಳರ ಕರ್ತವ್ಯ ಇಂದಿನ ಶಿಕ್ಷಕರಿಗೆ ಮಾದರಿ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು.
ಸಭೆಯಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯಲಕ್ಷ್ಮಿ, ಉಪನ್ಯಾಸಕರಾದ ಅಶೋಕ್ ಭಂಡಾರಿ, ರೇಖಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಿ. ಸುಬ್ರಾಯ ಹೊಳ್ಳ ನಿಧನಕ್ಕೆ ಮೌನ ಪ್ರಾರ್ಥನೆ ಹಾಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು.
Kshetra Samachara
09/02/2022 02:14 pm