ಮುಲ್ಕಿ: ಮುಲ್ಕಿ ಹೊಸ ಅಂಗಣ ಪ್ರಕಟಣಾಲಯದಿಂದ ಪ್ರಕಟಿತ ಸಂಪಾದಕ ಡಾ|ಹರಿಶ್ಚಂದ್ರ ಪಿ ಸಾಲ್ಯಾನ್ ರಚಿತ ಸಮಾಜ ಸುಧಾರಕ ಮಾಜಿ ಶಾಸಕ ಕೆ ಸೋಮಪ್ಪ ಸುವರ್ಣರ ಕೃತಿ ಬಿಡುಗಡೆ ಸಮಾರಂಭವು ಶುಕ್ರವಾರ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗ್ರಹದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ರವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ ಮಾಜಿ ಶಾಸಕ ದಿ. ಸೋಮಪ್ಪ ಸುವರ್ಣರು ಸಮಾಜ ಸೇವಕರಾಗಿ ಶಿಕ್ಷಣ ಕಾಂತಿಯ ಹರಿಕಾರರಾಗಿ ಮಾಡಿದ ಸಾಧನೆ ಅಪಾರವಾಗಿದ್ದು ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಅಳವಡಿಸಿಕೊಂಡು ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿಜೆಪಿಯ ದ.ಕ.ಜಿಲ್ಲಾಧ್ಯಕ್ಷ ಎಂ ಸುದರ್ಶನ್.ಯಕ್ಷಗಾನ ವಿದ್ವಾಂಸ,ಭಾಗವತ ಸುರೇಂದ್ರ ಪಣಿಯೂರು,ಉದ್ಯಮಿ ಸೂರ್ಯಕಾಂತ್ ಜೆ ಸುವರ್ಣ,ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ.ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರ್ ಕಲ್ ಮತ್ತು ಉದ್ಯಮಿ ಹರಿಂದ್ರ ಸುವರ್ಣ, ಹೊಸ ಅಂಗಣದ ಸಂಪಾದಕ ಡಾ|ಹರಿಶ್ಚಂದ್ರ ಪಿ ಸಾಲಿಯಾನ್ ಪ್ರಕಟಣೆ ಮತ್ತಿತರರು ಉಪಸ್ಥಿತರಿದ್ದರು. ವಾಮನ್ ನಡಿಕುದ್ರು ಧನ್ಯವಾದ ಅರ್ಪಿಸಿದರು.
ರವಿಚಂದ್ರ ರಾವ್ ನಿರೂಪಿಸಿದರು
Kshetra Samachara
22/01/2022 10:09 am