ಪುತ್ತೂರು: ಶಿಥಿಲಾವಸ್ಥೆಯಲ್ಲಿದ್ದ ಪುತ್ತೂರು ತಾಲೂಕಿನ ಪರ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಯನ್ನು ಅಭಿವೃದ್ಧಿ ಪಡಿಸುವ ಕೈಂಕರ್ಯದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ನಿರಂತರ ಶ್ರಮ ವಹಿಸಿದ್ದು, ಡಿ. 18 ರಂದು ಶಾಲೆಯಲ್ಲಿ ಗಣಪತಿ ಹವನ ಹಾಗೂ ಶ್ರೀ ಶಾರದಾ ಪೂಜೆ ನಡೆಯಲಿದೆ ಎಂದು ಶಾಲೆಯ ಕಟ್ಟಡ ಕಾಮಗಾರಿ ಸಮಿತಿ ಅಧ್ಯಕ್ಷರಾದ ವಿದ್ಯಾಗೌರಿ ತಿಳಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಟ್ಟಡ ಕಾಮಗಾರಿ ಸಮಿತಿಯಿಂದ 12 ಲಕ್ಷ ರೂ. ವ್ಯಯಿಸಿ ಶಾಲೆಯ ಮೇಲ್ಚಾವಣಿ ಕಾಮಗಾರಿ ನಡೆಸಲಾಗಿದೆ ಎಂದರು. 1956ರಲ್ಲಿ ಆರಂಭಗೊಂಡ ಈ ಶಾಲೆಗೆ ಇದೀಗ 65 ವರ್ಷಗಳಾಗಿದ್ದು, ಪುತ್ತೂರು ತಾಲೂಕಿನ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಒಂದಾಗಿದೆ ಎಂದು ಮಾಹಿತಿ ನೀಡಿದರು.
Kshetra Samachara
16/12/2021 12:29 pm