ಬೆಂಗಳೂರು: ದೂರದರ್ಶನ 'ಚಂದನ'ದಲ್ಲಿ ಪ್ರಸಾರಿತ ರಾಜ್ಯಮಟ್ಟದ 'ಸರ್ ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ "ಥಟ್ ಅಂತ ಹೇಳಿ...!?" ಆವೃತ್ತಿಯಲ್ಲಿ ಭಾಗವಹಿಸಿದ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆ 9ನೇ ತರಗತಿಯ ವಿದ್ಯಾರ್ಥಿ ಪ್ರಹ್ಲಾದ್ ಮೂರ್ತಿ ಕಡಂದಲೆ ಗರಿಷ್ಠ ಶೇ. 80 ಅಂಕ ಪಡೆದು ವಿಜೇತರಾಗಿದ್ದಾರೆ.
ಅವರು ಬಹುಮಾನವಾಗಿ ಎಂಟು ಪುಸ್ತಕಗಳನ್ನು ಪಡೆದು ಗಮನಾರ್ಹ ಸಾಧನೆ ತೋರಿದ್ದಾರೆ. ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಸ್ಕಂದ ಪ್ರಸಾದ್ ಭಟ್ ಹಾಗೂ ರಾಜಲಕ್ಷ್ಮಿ ದಂಪತಿಯ ಕಿರಿಯ ಪುತ್ರ ಪ್ರಹ್ಲಾದ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದ ವಿದ್ಯಾರ್ಥಿಯೂ ಆಗಿದ್ದು, ಹಲವಾರು ಯಕ್ಷಗಾನ ವೇದಿಕೆಯಲ್ಲಿ ತನ್ನ ಪ್ರತಿಭೆ ತೋರಿಸಿ ಯಕ್ಷಗಾನ ಪ್ರಿಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Kshetra Samachara
06/12/2021 03:39 pm