ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ರಾಷ್ಟ್ರೀಯ ಶಿಕ್ಷಣ ನೀತಿ ಕಾಯಿದೆ ತರುವ ಮುನ್ನ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದಿಲ್ಲ"

ಉಡುಪಿ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಜಾರಿ ಮಾಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ.ಆದರೆ ಈ ದೇಶದ ವಿದ್ಯಾರ್ಥಿಗಳ ಜೊತೆ ಚರ್ಚಿಸದೆ, ಯುವ ಜನರ ಅಭಿಪ್ರಾಯ ಸಂಗ್ರಹಿಸಿದೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿರುವ ಬಗ್ಗೆ ನಮಗೆ ಅಸಮಾಧಾನ ಇದೆ ಎಂದು ಎನ್ಎಸ್ ಯುಐ ಹೇಳಿದೆ.

ಇವತ್ತು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ಎಸ್ ಯುಐ ಕಾರ್ಯದರ್ಶಿ ರಫೀಕ್ ಮಾತನಾಡಿ,ಯಾವುದೇ ಮಸೂದೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಜನರ ಜನತೆಗೆ ಒಳಿತಾಗಬೇಕು.ಅಭಿವೃದ್ಧಿ ದೃಷ್ಡಿಯಿಂದ ಇದು ಅಗತ್ಯ.ಇದು ಆಗಬೇಕಾದರೆ ಕಾಯ್ದೆ ಅನುಷ್ಠಾನಕ್ಕೆ ಮುನ್ನ ಎಲ್ಲ ಹಂತಗಳಲ್ಲೂ ಚರ್ಚೆಯಾಗಬೇಕು. ಆದರೆ ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಎಂಇಪಿ ಕುರಿತು ನಮ್ಮ ದೇಶದ ಸಂಸದರೇ ಚರ್ಚೆ ಮಾಡಲು ಅವಕಾಶ ಸಿಕ್ಕಿಲ್ಲ. ದೇಶದ ಜನಪ್ರತಿನಿಧಿಗಳಲ್ಲಿ ಬಹಳಷ್ಟು ವಿದ್ಯಾವಂತರಿದ್ದಾರೆ, ವೈದ್ಯರಿದ್ದಾರೆ ಇಂಜಿನಿಯರ್ ಗಳಿದ್ದಾರೆ. ಹೀಗಾಗಿ ಕಾಯ್ದೆ ಅನುಷ್ಠಾನಕ್ಕೆ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೆ ತಂದಿದ್ದರೆ ನಮ್ಮ ಯಾವುದೇ ತಕರಾರಿರಲಿಲ್ಲ. ಆದರೆ ಕೇಂದ್ರ ಸರ್ಕಾರ ಅಭಿಪ್ರಾಯ ಪಡೆಯದೆ,ಚರ್ಚೆಯನ್ನೇ ನಡೆಸದೆ ಕಾಯಿದೆ ತರುತ್ತಿರುವುದು ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಎನ್ ಎಸ್ ಯುಐ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

24/11/2021 04:20 pm

Cinque Terre

6.69 K

Cinque Terre

1

ಸಂಬಂಧಿತ ಸುದ್ದಿ