ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಅಂಗನವಾಡಿ ಮಕ್ಕಳ ಸ್ವಾಗತ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ವಹಿಸಿ ಮಾತನಾಡಿ, ಸರಕಾರಿ ಶಾಲೆಗಳ ಬಗ್ಗೆ ಮಕ್ಕಳಿಗೆ ಕೀಳರಿಮೆ ಸಲ್ಲದು. ಮಕ್ಕಳು ಓದಿ ಕೀರ್ತಿವಂತನಾಗಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮುಲ್ಕಿ ಅರಮನೆಯ ಗೌತಮ್ ಜೈನ್, ನಿವೃತ್ತ ಬ್ಯಾಂಕ್ ಅಧಿಕಾರಿ ಗಳಾದ ಎಚ್ ನಾರಾಯಣ, ಎಚ್. ಕೃಷ್ಣ, ಪಂಚಾಯತ್ ಕಾರ್ಯದರ್ಶಿ ಲೋಕನಾಥ್, ನಿವೃತ್ತ ಶಿಕ್ಷಕ ಎಂ.ಕೃಷ್ಣ ಹೆಬ್ಬಾರ್ ಉಪಸ್ಥಿತರಿದ್ದರು.
ಮಕ್ಕಳಿಗೆ ದಾನಿಗಳಾದ ಧರ್ಮದೈವ ಜಾರಂದಾಯ ದೈವಸ್ಥಾನದ ಆಡಳಿತ ಮಂಡಳಿ, ಪಿಸಿಎ ಬ್ಯಾಂಕ್, ಮುಲ್ಕಿ ಅರಮನೆ ಗೌತಮ್ ಜೈನ್, ಪಂ. ಸದಸ್ಯ ದಿನೇಶ್ ಶೆಟ್ಟಿ, ಕೃಷ್ಣ ಎಚ್ ಮತ್ತು ನಾರಾಯಣ ಪಡುತೋಟ, ಜ್ಯೋತಿ ಮತ್ತು ಎಂ ಕೆ ಹೆಬ್ಬಾರ್, ಅವಿನಾಶ್ ಹೆಬ್ಬಾರ್, ಭುಜಂಗ ಎಂ ಶೆಟ್ಟಿ , ವಸಂತ ಎಂ ಶೆಟ್ಟಿ ವತಿಯಿಂದ ವಿದ್ಯಾರ್ಥಿ ವೇತನ ಸಹಿತ ವಿವಿಧ ವಸ್ತುಗಳನ್ನು ವಿತರಿಸಲಾಯಿತು.
Kshetra Samachara
15/11/2021 12:25 pm