ಮುಲ್ಕಿ: ಕೊರೊನಾ ಸಂದಿಗ್ದ ಸ್ಥಿತಿಯಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿವಹಿಸಬೇಕು ಎಂದು ಪಡುಪಣಂಬೂರು ಗ್ರಾಪಂ ಸದಸ್ಯ ಹರಿಪ್ರಸಾದ್ ಹೇಳಿದರು.ಅವರು ಪಡುಪಣಂಬೂರು ಗ್ರಾಮಪಂಚಾಯತ್ ಬೆಳ್ಳಾಯರು ಗ್ರಾಮದ ಕಲ್ಲಾಪು ಅಂಗನವಾಡಿ ಕೇಂದ್ರದ ಶಾಲಾ ಪ್ರಾರಂಭೋತ್ಸವದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಮೊದಲು ಮಕ್ಕಳಿಗೆ ಹೂಗುಚ್ಚ ನೀಡುವ ಮೂಲಕ ಶಾಲೆಗೆ ಸ್ವಾಗತಿಸಲಾಯಿತು.ಈ ಸಂದರ್ಭ ಅಂಗನವಾಡಿ ಶಿಕ್ಷಕಿ ಮೋಹಿನಿ, ಸಹಾಯಕಿ ಸೌಮ್ಯ ಸಮಿತಿ ಸದಸ್ಯರಾದ ಮೋಹನ ಆಶಾ ಕಾರ್ಯಕರ್ತೆ ಪುಷ್ಪ ಸ್ತ್ರೀಶಕ್ತಿ ಸಂಘದ ಕಾರ್ಯದರ್ಶಿ ಕಸ್ತೂರಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/11/2021 12:21 pm