ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಚಿಣ್ಣರ ಕಲರವ ಶುರು: ಶಾಲೆಯತ್ತ ಪ್ಲೇ ಸ್ಕೂಲ್ ,ಕೆಜಿ ವಿದ್ಯಾರ್ಥಿಗಳು

ಉಡುಪಿ: ರಾಜ್ಯಾದ್ಯಂತ ಇವತ್ತು ಪುಟ್ಟ ಕಂದಮ್ಮಗಳಿಗೆ ಪ್ಲೇ ಸ್ಕೂಲ್ ,ಎಲ್ ಕೆಜಿ ಯುಕೆಜಿ ಪ್ರಾರಂಭವಾಗುತ್ತಿದೆ.ಕೊರೋನಾ ಮಹಾಮಾರಿ ಅಪ್ಪಳಿಸಿದಾಗ ಅಂಬೆಗಾಲಿಡುತ್ತಿದ್ದ ಚಿಣ್ಣರು ಇವತ್ತು ಶಾಲೆಗಳಿಗೆ ಬರುವ ದೃಶ್ಯ ಮುದ ನೀಡುವಂತಿತ್ತು.

ಉಡುಪಿಯ ಪ್ಲೇ ಸ್ಕೂಲ್ ಗೆ ಬೆಳಿಗ್ಗೆಯೇ ಆಗಮಿಸಿದ ಚಿಣ್ಣರು ಫ್ರೆಂಡ್ಸ್ ಜೊತೆ ಆಟವಾಡಲು ಶುರು ಮಾಡಿದ್ದಾರೆ.ಒಂದೂ ಮುಕ್ಕಾಲು ವರ್ಷ ಬಾಗಿಲು ಹಾಕಿದ್ದ ಅಸಂಖ್ಯ ಪ್ಲೇ ಸ್ಕೂಲ್ ,ಅಂಗನವಾಡಿಗಳು ಇಂದು ಬಾಗಿಲು ತೆರೆದಿವೆ.

ಮಕ್ಕಳ ಕಲಿಕೆಯ ದೃಷ್ಟಿಯಿಂದ ಮಾತ್ರವಲ್ಲದೆ, ಬಾಡಿಗೆ ಕಟ್ಟಡಗಳಲ್ಲಿ,ಪ್ಲೇ ಸ್ಕೂಲ್ ನಡೆಸುವವರೂ ಸಾಕಷ್ಟು ಆರ್ಥಿಕ ಹೊಡೆತ ತಿಂದಿದ್ದಾರೆ.ಕೊನೆಗೂ ಪೂರ್ವ ಪ್ರಾಥಮಿಕ ತರಗತಿಗಳು ಪ್ರಾರಂಭವಾಗಿರುವುದು ಪ್ಲೇ ಸ್ಕೂಲ್ ನಡೆಸುವವರ ಮುಖದಲ್ಲೂ ಮಂದಹಾಸಕ್ಕೆ ಕಾರಣವಾಗಿದೆ.

Edited By : Manjunath H D
Kshetra Samachara

Kshetra Samachara

08/11/2021 12:08 pm

Cinque Terre

4.05 K

Cinque Terre

0

ಸಂಬಂಧಿತ ಸುದ್ದಿ