ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಹುರಿದುಂಬಿಸಿದ ಡಿಡಿಪಿಐ

ಉಡುಪಿ: ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದ್ದಂತೆಯೇ ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳು ಆರಂಭವಾಗಿವೆ. ಶಾಲಾ ವಠಾರದಲ್ಲಿ ಹುರುಪು, ಲವಲವಿಕೆ ಕಂಡುಬರುತ್ತಿದೆ. ಶಿಕ್ಷಕರು ಬಹಳ ಉತ್ಸಾಹದಿಂದ ಪಾಠಗಳನ್ನು ಶುರುಮಾಡಿದ್ದಾರೆ. ಒಪ್ಪಿಗೆ ಪತ್ರಗಳ ಜೊತೆ ಪೋಷಕರು ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಿದ್ದಾರೆ.

ಈ ನಡುವೆ ಉಡುಪಿ ಡಿಡಿಪಿಐ ಅವರು ಸರ್ಕಾರಿ ಅನುದಾನಿತ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಉಡುಪಿ ನಗರದ ವಳಕಾಡು ನಾರ್ತ್ ಶಾಲೆಗೆ ಭೇಟಿ ಕೊಟ್ಟ ಡಿಡಿಪಿಐ ಅವರು ಮಕ್ಕಳ ಜೊತೆ ಕೆಲ ಹೊತ್ತು ಹಾಡಿ ಕುಣಿದರು. ಸ್ವತಃ ಡಿಡಿಪಿಐ ಎಚ್. ಎನ್. ನಾಗೂರ ಪಠ್ಯದಲ್ಲಿರುವ ಪದ್ಯವೊಂದನ್ನು ಮಕ್ಕಳಿಗೆ ಕಲಿಸಿದರು. ತರಗತಿಯ ಶಿಕ್ಷಕಿ ಪದ್ಯ ಕುಣಿತ ಕಲಿಸುವ ಸಂದರ್ಭ ಡಿಡಿಪಿಐ ತಾವೂ ಭಾಗಿಯಾದರು. ಉಳಿದ ತರಗತಿಗಳಿಗೂ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

Edited By : Manjunath H D
Kshetra Samachara

Kshetra Samachara

25/10/2021 02:16 pm

Cinque Terre

13.68 K

Cinque Terre

0