ಕಿನ್ನಿಗೋಳಿ: ಶಾಲೆ ಪುನಾರಂಭ; ಮಕ್ಕಳಿಗೆ ಬಿಸಿಯೂಟ ಜತೆಗೆ ಸಿಹಿ ವಿತರಣೆ

ಮುಲ್ಕಿ: ದಸರಾ ರಜೆಯೂ ಮುಗಿದು ಶಾಲೆಗಳೆಲ್ಲ ಆರಂಭವಾಗಿದ್ದು, ಕಿನ್ನಿಗೋಳಿ ಪರಿಸರದಲ್ಲಿನ ನಡುಗೋಡು ಪ್ರೌಢಶಾಲೆಯಲ್ಲಿ ಎಲ್ಲ ಮಕ್ಕಳೂ ತರಗತಿಗೆ ಹಾಜರಾಗಿದ್ದಾರೆ. ಹಲವು ದಿನಗಳ ನಂತರ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯೂ ಪುನಾರಂಭಗೊಂಡಿದೆ.
ಅಧಿಕಾರಿಗಳ ಆದೇಶದಂತೆ ಶಾಲಾ ಪರಿವರ್ತನಾ ವೆಚ್ಚದಿಂದ ಪಲ್ಯ, ಸಾಂಬಾರಿಗೆ ಬೇಕಾದ ಪದಾರ್ಥವನ್ನು ತರಲಾಗಿದೆ. ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಯಿಂದ ತರಲು ಸೂಚಿಸಲಾಗಿದೆ. ಆದರೆ, ಶಾಲಾ ಮುಖ್ಯಶಿಕ್ಷಕಿ ಶಾಂತಿ ಭಟ್ ಅವರು ತಾನೇ ಸ್ವಯಂ ಹಣವನ್ನು ಹಾಕಿದ್ದು, ಪಾಯಸಕ್ಕೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ರವೀಂದ್ರ ಶೆಟ್ಟಿಯವರು ಹಣ ನೀಡಿದ್ದಾರೆ.

ಶಾಲಾ ಪ್ರಾರಂಭದ ಜೊತೆ ವಿಶ್ವ ಕೈತೊಳೆಯುವ ದಿನವನ್ನೂ ಆಚರಿಸಲಾಯಿತು. ಕೆಮ್ರಾಲ್ ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಹೆಚ್ಚಿನ ಮಕ್ಕಳು ತರಗತಿಗೆ ಹಾಜರಾಗಿದ್ದು, ಬಿಸಿಯೂಟದ ವ್ಯವಸ್ಥೆಗೆ ತೊಡಕು ಉಂಟಾಗಿಲ್ಲ. ಅಕ್ಕಿ ಸರಬರಾಜು ಆಗಿದ್ದು, ತರಕಾರಿ, ಬೆಳೆ ಕಾಳು ಅಕ್ಷರ ದಾಸೋಹ ಯೋಜನೆಯಡಿ ಸ್ಥಳೀಯವಾಗಿ ಖರೀದಿ ಮಾಡಿ ಬಿಸಿಯೂಟ ಮಾಡಲಾಗಿದೆ. ಜತೆಗೆ ಹೆಸರು ಬೆಳೆ ಪಾಯಸ ಮಾಡಲಾಗಿದೆ ಎಂದು ಮುಖ್ಯ ಶಿಕ್ಷಕ ಅಜ್ಜಯ್ಯ ತಿಳಿಸಿದ್ದಾರೆ.

ಗುತ್ತಕಾಡು ಸರಕಾರಿ ಶಾಲೆಯಲ್ಲಿ ಅಕ್ಕಿ ಬಂದಿದ್ದು, ಉಳಿದ ತರಕಾರಿ, ಬೆಳೆಕಾಳು ಸ್ಥಳೀಯವಾಗಿ ಖರೀದಿಸಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಲಾಡು ನೀಡಲಾಗಿದೆ ಎಂದು ಮುಖ್ಯ ಶಿಕ್ಷಕಿ ರೀಟಾ ಡೇಸಾ ತಿಳಿಸಿದ್ದಾರೆ.

Kshetra Samachara

Kshetra Samachara

1 month ago

Cinque Terre

1.72 K

Cinque Terre

1

  • KUDLADA BORI💖😘😋😋😋💖
    KUDLADA BORI💖😘😋😋😋💖