ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ನರ್ಸಿಂಗ್ ಕ್ಷೇತ್ರದಲ್ಲಿ ಸಾಧಕರಾಗಲು ಸಾಧಿಸುವ ಛಲ ಪ್ರಾಮಾಣಿಕ ಪ್ರಯತ್ನ ಅಗತ್ಯ"

ಮುಲ್ಕಿ:ಒಳ್ಳೆಯ ಮನಸ್ಸು ಸಾಧಿಸುವ ಛಲ ಹಾಗೂ ಪ್ರಾಮಾಣಿಕ ಪ್ರಯತ್ನವು ಸೇವೆಯನ್ನು ಬಯಸುವ ನರ್ಸಿಂಗ್ ಕ್ಷೇತ್ರದಲ್ಲಿ ಸಾಧಕರಾಗಲು ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಮಾದರಿಯಾಗಿ ಸಂಸ್ಥೆಯ ಹೆಸರನ್ನು ಬೆಳಗಿಸಬೇಕೆಂದು ಬೆಂಗಳೂರು ಒಲವಿನಹಳ್ಳಿಯ ಮರಿಯಾ ಸದನ ಮುಖ್ಯಸ್ಥೆ ಭಗಿನಿ ಲೂಸಿ ರೋಡ್ರಿಗಸ್ ಹೇಳಿದರು.

ಅವರು ಮುಲ್ಕಿಯ ಲೋಬೋ ಟೀಚರ್ಸ್ ಫೌಂಡೇಶನ್‌ನ ಸೈಂಟ್ ಆನ್ಸ್ ಸಮೂಹ ವಿದ್ಯಾ ಸಂಸ್ಥೆಯ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ.ಎರಿಕ್ ಸಿ.ಲೋಬೋ ಮಾತನಾಡಿ, ಸೇವೆಯನ್ನು ಗುರಿಯಾಗಿಸಿ ಪ್ರಾರಂಭಗೊಂಡ ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧಕರಾಗಿ ಬೆಳೆದಿದ್ದಾರೆ. ವಿದ್ಯಾರ್ಥಿಗಳು ಉತ್ತಮ ನಡೆ ನುಡಿಯಿಂದ ಸಂಸ್ಕಾರವಂತರಾಗಿ ಸಂಸ್ಥೆಯ ಹೆಸರನ್ನು ಬೆಳಗಿಸಬೇಕು ಎಂದರು.

ಈ ಸಂದರ್ಭ ಭಗಿನಿ ಲೂಸಿ ರೋಡ್ರಿಗಸ್ ಮತ್ತು ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಹೆಲೆನ್ ಕ್ಲಾರೆಟ್ ಡಿಸೋಜಾ ದೀಪ ಪ್ರಜ್ವಲನಗೊಳಿಸಿದರು. ಮತ್ತು ಪ್ರೊ.ಮೇರಿ ಶ್ಯಾಮ್ ಭಟ್ ಪ್ರಮಾಣವಚನ ಭೋಧಿಸಿದರು. ಲೋಬೋ ಟೀಚರ್ಸ್ ಫೌಂಡೇಶನ್ ಟ್ರಸ್ಟಿ ಸರಿತಾ ಡಿಸೋಜಾ, ಆಡಳಿತಾಧಿಕಾರಿ ಮೇರಿ ಕ್ರಿಸ್ಟೆಲ್ ವಾಸ್ ಮತ್ತಿತರರು ಉಪಸ್ತಿತರಿದ್ದರು.

ಹೆಲೆನ್ ಕ್ಲಾರೆಟ್ ಡಿಸೋಜಾ ಸ್ವಾಗತಿಸಿದರು. ರೇಷ್ಮಾ ಮಥಾಯಿಸ್ ವಂದಿಸಿದರು,ಫ್ರೆನ್ಸಿಟಾ ಡಿಸೋಜಾ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Edited By : PublicNext Desk
Kshetra Samachara

Kshetra Samachara

17/10/2021 09:09 am

Cinque Terre

17.35 K

Cinque Terre

0

ಸಂಬಂಧಿತ ಸುದ್ದಿ