ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಬದುಕು‌ ಭಾರವಲ್ಲ' ಕೃತಿ ಅನಾವರಣ

ಮಂಗಳೂರು: ಬದುಕು ಬಹಳ ತೂಕದ್ದು, ಇದನ್ನು ಹಗುರವೆಂದಿಣಿಸಿ ಇದನ್ನು ಹಾಳುಮಾಡಬೇಡಿ ಎಂಬ ನಿಲುವನ್ನು 'ಬದುಕು ಭಾರವಲ್ಲ' ಕೃತಿಯ 38 ಲೇಖನಗಳು ಸೂಚ್ಯವಾಗಿ ತಿಳಿಸುತ್ತವೆ ಎಂದು ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ‌ಗೌಡ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ‌ ಆಕೃತಿ ‌ಆಶ್ರಯ ಪಬ್ಲಿಕೇಷನ್ ಪ್ರಕಟಿಸಿರುವ ಹರೀಶ್ ಕುಮಾರ್ ಕುಡ್ತಡ್ಕ ಬರೆದಿರುವ 'ಬದುಕು ಭಾರವಲ್ಲ' ಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿ, ಇಲ್ಲಿನ‌ 38 ಲೇಖನಗಳೂ ಸೃಜನಶೀಲವಾಗಿದ್ದು, ಸಕಾಲಿಕವೂ, ಪ್ರಸ್ತುತವಾಗಿದೆ ಎಂದು ಹೇಳಿದರು.

'ಬದುಕು ಭಾರವಲ್ಲ' ಎಂದರೆ ತೂಕದ ಬದುಕನ್ನು ಕಡೆಗಣಿಸಬಾರದು. ಬದುಕಿನ ತೂಕದ ಕಡೆಗೆ ನಾವು ಹೆಜ್ಜೆಯನ್ನಿರಿಸಬೇಕು. ಬದುಕಿನ ತೂಕವನ್ನು ಇಳಿಸುವ ಏನೇನು ಸಂಗತಿಗಳಿವೆಯೋ ಅವುಗಳ ಬಗ್ಗೆ ಎಚ್ಚರವಹಿಸುವ ನಿಲುವಿನ ಬಗ್ಗೆ ಇಲ್ಲಿನ ಲೇಖನಗಳಿವೆ. ಆದ್ದರಿಂದ ಬದುಕಿನ‌ ಅನೇಕ ಸಮಸ್ಯೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಅರ್ಥಮಾಡಿಕೊಂಡು ಅದರ ಕುರಿತಾಗಿ ಸ್ಪಷ್ಟ ನಿಲುವನ್ನು ಬದುಕಲ್ಲಿ ಹೊಂದಬೇಕು ಎಂದು ಡಾ.ಕೆ.ಚಿನ್ನಪ್ಪ‌ಗೌಡ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

31/08/2021 10:05 pm

Cinque Terre

26.37 K

Cinque Terre

2

ಸಂಬಂಧಿತ ಸುದ್ದಿ