ಬಂಟ್ವಾಳ: ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಅವರಿಗೆ 625ರಲ್ಲಿ 625 ಅಂಕಗಳು ಲಭಿಸಿವೆ. ಬಂಟ್ವಾಳ ತ್ಯಾಗರಾಜ ರಸ್ತೆ ನಿವಾಸಿ ಎನ್. ವೆಂಕಟೇಶ್ ಮಲ್ಯ ಹಾಗೂ ರಾಧಿಕಾ ಮಲ್ಯ ಅವರ ಪುತ್ರನಾಗಿರುವ ಪ್ರತೀಕ್ ಅವರು ಮುಂದೆ ಕಾಮರ್ಸ್ ನಲ್ಲಿ ಕಲಿಕೆ ಮುಂದುವರಿಸಿ, ಉದ್ಯಮಿಯಾಗುವ ಗುರಿ ಹೊಂದಿದ್ದಾರೆ. ತನ್ನ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ, ಪೋಷಕರು, ಮನೆಯವರ ಬೆಂಬಲವೇ ಕಾರಣ ಎಂದು ಹೇಳಿರುವ ಅವರು ಸತತ ಓದುವಿಕೆಯೊಂದಿಗೆ ಬಿಡುವಾದಾಗ ಕೊಳಲುವಾದನ ಹವ್ಯಾಸವಾಗಿಟ್ಟುಕೊಂಡಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ.
Kshetra Samachara
09/08/2021 07:12 pm