ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ಹೋಬಳಿಯಲ್ಲಿ ಶಾಲಾರಂಭ: ಕೊರೊನಾ ಸುರಕ್ಷಾ ಕ್ರಮಗಳೊಂದಿಗೆ ಶಾಲೆಯತ್ತ ದಿಟ್ಟ ನಡೆ...

ಮುಲ್ಕಿ: ಮುಲ್ಕಿ ಹೋಬಳಿಯ ಶಾಲೆ-ಕಾಲೇಜುಗಳಲ್ಲಿ ಸರಕಾರದ ಕೊರೊನಾ ಕಟ್ಟು ನಿಟ್ಟಿನ ನಿಯಮಾವಳಿಯಂತೆ ಶಿಕ್ಷಣ ಆರಂಭವಾಗಿದೆ.

ಎಸ್ಸೆಸೆಲ್ಸಿ, ಪಿಯುಸಿ ಜೊತೆಗೆ ಪ್ರಾಥಮಿಕ ಶಿಕ್ಷಣ 6 ಮತ್ತು 7ನೇ ತರಗತಿ ಆರಂಭವಾಗಿದ್ದು ಮನೆಯಲ್ಲಿ ಆರಾಮವಾಗಿದ್ದ ವಿದ್ಯಾರ್ಥಿಗಳು ಎಚ್ಚರಿಕೆಯ ಹೆಜ್ಜೆಯೊಂದಿಗೆ ಶಾಲೆಯತ್ತ

ಮುಖ ಮಾಡಿದ್ದಾರೆ.

ಮುಲ್ಕಿ ಮಹರ್ಷಿ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಿಕಾ ಭಂಡಾರಿ ಮಾತನಾಡಿ, ತರಗತಿಗಳು ಸರಕಾರದ ನೀತಿ- ನಿಯಮ ಪಾಲಿಸಿಕೊಂಡು ತೀವ್ರ ಎಚ್ಚರಿಕೆಯೊಂದಿಗೆ ಶಾಲೆ ಆರಂಭವಾಗಿದ್ದು, ಬೆಳಗ್ಗೆ ಮತ್ತು ಸಂಜೆ ಎರಡು ವಿಭಾಗದಲ್ಲಿ ತರಗತಿಗಳನ್ನು ನಡೆಸುವ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲೆಯ ಒಳಗೆ ಬರುವ ಮೊದಲು ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ವಿದ್ಯಾರ್ಥಿಗಳ ಪೋಷಕರ ಅನುಮತಿಯೊಂದಿಗೆ ತರಗತಿಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಲಾಗುವುದು ಎಂದರು. ಮುಲ್ಕಿ ಹೋಬಳಿಯ ಅನೇಕ ಶಾಲಾ-ಕಾಲೇಜುಗಳ ತರಗತಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.

Edited By : Nagesh Gaonkar
Kshetra Samachara

Kshetra Samachara

01/01/2021 04:48 pm

Cinque Terre

8.7 K

Cinque Terre

0

ಸಂಬಂಧಿತ ಸುದ್ದಿ