ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಶ್ರೀ ಶಾರದಾ ಸದ್ವಿದ್ಯಾ ವಸಂತ ಶಿಬಿರದ ಸಮಾರೋಪ ಸಮಾರಂಭ

ಬೈಂದೂರು: ಅಂಕಗಳನ್ನು ಪಡೆಯುವುದಕ್ಕಾಗಿಯೇ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಸಂಸ್ಕಾರಯುತ ಬದುಕಿನ ನಿರ್ಮಾಣಕ್ಕೆ ವಿದ್ಯೆ ಪೂರಕವಾಗಿರಬೇಕು ಎಂದು ಉಳ್ಳೂರು ಸ.ಹಿ.ಪ್ರಾ ಶಾಲಾ ಮುಖ್ಯೋಪಾಧ್ಯಾಯರಾದ ಮಾಧವ ಅಡಿಗರು ಹೇಳಿದ್ದಾರೆ.

ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ವೈದಿಕ ಮಂದಿರದ ವಠಾರದಲ್ಲಿ ಭಾನುವಾರ ನಡೆದ ಶ್ರೀ ಶಾರದಾ ಸದ್ವಿದ್ಯಾ ವಸಂತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಣದಿಂದ ಜೀವನವನ್ನು ಸಫಲ ಮಾಡಿಕೊಳ್ಳಲು ಸಾಧ್ಯವಿಲ್ಲ ನಮ್ಮ ಸಂಸ್ಕೃತಿ ಸಂಸ್ಕಾರಯುತ ಬದುಕಿನಿಂದ ಅದು ಸಾಧ್ಯವಿದೆ ಶಂಕರಾಚಾರ್ಯರ ಜನ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶಿಬಿರ ಅನುಕರಣೀಯವಾಗಿದೆ ಎಂದು ತಿಳಿಸಿದರು.

ಶ್ರೀ ಶಾರದಾ ವಿದ್ಯಾ ಪೀಠಂ ಶ್ರಂಗೇರಿಯ ದಕ್ಷಿಣ ಪ್ರಾಂತೀಯ ಧರ್ಮಾಧಿಕಾರಿಗಳಾದ ವೇ.ಮೂ.ಲೋಕೇಶ್ ಅಡಿಗ ನಾಗ ಪಾತ್ರಿಗಳು ಬಡಾಕೆರೆ ಅವರು ಮಾತನಾಡಿ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶಿಬಿರಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ ಬಾಲ್ಯದ ನೆನಪುಗಳ ಜತೆಗೆ ಸಮಯ ಕಳೆದಿರುವುದು ಮಕ್ಕಳಿಗೂ ಸಂತೃಪ್ತಿಯನ್ನು ಕೊಟ್ಟಿದೆ ಮಕ್ಕಳು ಪ್ರತಿಭಾನ್ವಿತ ರಾಗಬೇಕು ಎನ್ನುವ ದೃಷ್ಟಿಯಿಂದ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.

ಕಿರಿ ಮಂಜೇಶ್ವರ ದೇವಳದ ಪುರೋಹಿತರಾದ ವೇ.ಮೂ.ರಾಮಕೃಷ್ಣ ಕಾರಂತ, ಲೇಖಕರಾದ ಅನಂತೇಶ್ ಭಟ್ ನೆಂಪು, ಉದ್ಯಮಿ ಕೃಷ್ಣ ಮಂಜರು ಮಾರಣಕಟ್ಟೆ ಶುಭಹಾರೈಸಿದರು.

ಯೋಗಗುರು ಸುಬ್ಬ ದೇವಾಡಿಗ ಅರೆಹೊಳೆ ಮತ್ತು ಅರೆಹೊಳೆ ಶಾಲೆ ವಿದ್ಯಾರ್ಥಿನಿ ಯೋಗ ಪಟು ಕು.ನಿರೀಕ್ಷಾ ಅವರನ್ನು ಸನ್ಮಾನಿಸಲಾಯಿತು. ಲಕ್ಷ್ಮೀಶ ಅಡಿಗ ಸ್ವಾಗತಿಸಿದರು,ವಿನಯ ನಾಗೇಂದ್ರ ಅಡಿಗ ಪ್ರಾರ್ಥಿಸಿದರು, ಲೋಕೇಶ್ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಶಾಂತ್ ಮೈಯ್ಯ ನಿರೂಪಿಸಿದರು, ನಾಗೇಂದ್ರ ಅಡಿಗ ವಂದಿಸಿದರು.

ಶಿಬಿರಾರ್ಥಿಗಳು ಮಕ್ಕಳ ಪೋಷಕರು ಉಪಸ್ಥಿತರಿದ್ದರು. 21 ದಿನಗಳ ಕಾಲ ನಡೆದ ಶಿಬಿರದಲ್ಲಿ 50 ಶಿಬಿರಾರ್ಥಿಗಳು ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

09/05/2022 12:27 pm

Cinque Terre

13.02 K

Cinque Terre

0

ಸಂಬಂಧಿತ ಸುದ್ದಿ