ಕುಂದಾಪುರ: ಇಲ್ಲಿನ ಸರಕಾರಿ ಕಾಲೇಜಿನ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಕಾಲೇಜಯ ಗೇಟ್ ನಲ್ಲೇ ತಮ್ಮ ಅಸೈನ್ ಮೆಂಟ್ ಸಲ್ಲಿಸಿದ ಪ್ರಸಂಗ ನಡೆಯಿತು. ಕಾಲೇಜಿನ ಕಾಮರ್ಸ್ ವಿಭಾಗದ ನಾಲ್ಕು ಮಂದಿ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು, ಆಂತರಿಕ ಅಂಕಕ್ಕಾಗಿ ಅಸ್ಸೈನ್ ಮೆಂಟ್ ಸಲ್ಲಿಸುವುದಿತ್ತು.ಆದರೆ ಅವರು ಕಾಲೇಜು ಪ್ರಾರಂಭವಾದಾಗಿನಿಂದಲೂ ತರಗತಿಗೆ ಗೈರಾಗುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕಾಲೇಜಿನ ಗೇಟ್ ಹೊರಗಡೆ ನಿಂತೇ ತಮ್ಮ ಉಪನ್ಯಾಸಕರಿಗೆ ಅಸೈನ್ ಮೆಂಟ್ ಸಲ್ಲಿಸಿದ್ದಾರೆ.
ಈ ತಿಂಗಳ ಪ್ರಾರಂಭದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಾಗ ಹಿಜಾಬ್ ಧರಿಸಿ ಆಗಮಿಸಿದ ಕಾರಣಕ್ಕೆ ಕುಂದಾಪುರ ಸರಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಕಾಲೇಜಿನ ಗೇಟಿನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
‘ಕಾಮರ್ಸ್ ವಿಭಾಗದವರು ಆಂತರಿಕ ಅಂಕಕ್ಕಾಗಿ ಅಸ್ಸೈನ್‌ಮೆಂಟ್‌ನ್ನು ವರ್ಷದಲ್ಲಿ ಎರಡು ಬಾರಿ ಸಲ್ಲಿಸಬೇಕಾಗುತ್ತದೆ. ಅದರಂತೆ ಹಿಜಾಬ್ ಧರಿಸಿ ಬರುತ್ತಿದ್ದ ಕಾಲೇಜಿನ ವಿದ್ಯಾರ್ಥಿನಿಯರು, ಅಸ್ಸೈನ್‌ಮೆಂಟ್‌ನ್ನು ಒಪ್ಪಿಸುತ್ತಿದ್ದಾರೆ. ಇವತ್ತು ನಾಲ್ಕು ಮಂದಿ ಬಂದಿದ್ದಾರೆ. ಮೊನ್ನೆ ಕೆಲವು ಪೋಷಕರು ಕೂಡ ತಮ್ಮ ಮಕ್ಕಳ ಅಸ್ಸೈನ್‌ಮೆಂಟ್ ಕೊಟ್ಟು ಹೋಗಿದ್ದಾರೆ" ಎಂದು ಉಪನ್ಯಾಸಕರೊಬ್ವರು ಮಾಹಿತಿ ನೀಡಿದರು.
PublicNext
22/02/2022 09:05 pm