ಉಡುಪಿ: ಉಡುಪಿಯ ಅಜ್ಜರಕಾಡು ವಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರು ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಪೋಷಕರೊಬ್ಬರು ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಅಸಮಾಧಾನ ಹಂಚಿಕೊಂಡಿದ್ದಾರೆ.
ನನ್ನ ಮಗಳು ಪ್ರಾರಂಭದಿಂದಲೂ ಡಿಗ್ರಿ ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತಿದ್ದಳು.ಪ್ರಾರಂಭದಲ್ಲಿ ಕಾಲೇಜಿನವರೆಗೆ ಯಾವುದೇ ಸಮಸ್ಯೆಯೂ ಇರಲಿಲ್ಲ. ಮತ್ತು ಪ್ರಾರಂಭದಿಂದಲೂ ತಲೆ ವಸ್ತ್ರ ಧರಿಸಿ ಬರಬಹುದು ಎಂದು ಕಾಲೇಜಿನವರು ಹೇಳುತ್ತಿದ್ದರು. ಆದರೆ ಈಗ ಹೈಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಹಿಜಾಬ್ ಧರಿಸದೆ ಒಳಗೆ ಬನ್ನಿ ಎಂದು ಹೇಳುತ್ತಿದ್ದಾರೆ. ಇದು ಯಾವ ನ್ಯಾಯ? ಹೈಕೋರ್ಟ್ ಹೇಳಿರುವುದು ಪದವಿ ಕಾಲೇಜಿಗೆ ಅನ್ಚಯ ಆಗುತ್ತದೆಯೇ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kshetra Samachara
17/02/2022 04:48 pm