ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಎರಡನೇ ದಿನವೂ ಹೊರ ನಡೆದ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು!

ಉಡುಪಿ: ಉಡುಪಿಯ ಅಜ್ಜರ ಕಾಡುವಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡನೇ ದಿನವೂ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯಿಂದ ದೂರ ಉಳಿದಿದ್ದಾರೆ.

ಎಂದಿನಂತೆ ಹಿಜಾಬ್ ಧರಿಸಿ ಬಂದ ಈ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದು ,ತರಗತಿಯಲ್ಲಿ ಕೂರದೆ ಮನೆಗೆ ವಾಪಾಸಾದರು.ಈ ಸಂದರ್ಭ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ನಾವು ಹಿಂದಿನಿಂದಲೂ ಹಿಜಾಬ್ ಧರಿಸಿ ಬರುತ್ತಿದ್ದು ಅದನ್ನು ತೆಗೆದು ಹೋಗಲು ಕಷ್ಟವಾಗುತ್ತಿದೆ. ನಮಗೆ ಶಿಕ್ಷಣ ಮತ್ತು ತಲೆ ವಸ್ತ್ರ ಹಾಕುವ ಸಂಪ್ರದಾಯ ಎರಡೂ ಮುಖ್ಯ. ಪ್ರಾಂಶುಪಾಲರು ಮತ್ತು ಶಿಕ್ಷಕರು ನಮಗೆ ಮನವರಿಕೆ ಮಾಡಿದ್ದಾರೆ.ಆದರೆ ಮುಂದಿನ ಆದೇಶದ ತನಕ ನಾವು ತರಗತಿಗೆ ಹಾಜರಾಗುವುದಿಲ್ಲ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

17/02/2022 03:37 pm

Cinque Terre

10.96 K

Cinque Terre

0

ಸಂಬಂಧಿತ ಸುದ್ದಿ