ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಹಿಜಾಬ್ ವಿವಾದ: ಪಬ್ಲಿಕ್ ನೆಕ್ಸ್ಟ್ ಜೊತೆ ವಿದ್ಯಾರ್ಥಿನಿಯರು ಹೇಳಿದ್ದೇನು?

ವರದಿ: ರಹೀಂ ಉಜಿರೆ

ಕುಂದಾಪುರ: ಹಿಜಾಬ್ ವಿವಾದವೀಗ ಉಡುಪಿಯಿಂದ ಕುಂದಾಪುರ ಅಲ್ಲಿಂದ ಬೈಂದೂರು ತಾಲೂಕು ತಲುಪಿದೆ.ಇಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಕಾಲೇಜುಗಳಿಗೂ ಹಬ್ಬುವ ಭೀತಿ ಎದುರಾಗಿದೆ.

ಇವತ್ತು‌ ಕುಂದಾಪುರ ಸರಕಾರಿ ಕಾಲೇಜಿನಲ್ಲಿ ಎರಡನೇ ದಿನವೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಒಳಗೆ ಪ್ರವೇಶ ನಿರಾಕರಿಸಲಾಯಿತು.ನಿನ್ನೆ ಇಡೀ ದಿನ ಗೇಟಿನ ಹೊರಗೆ ಕಾದ ವಿದ್ಯಾರ್ಥಿನಿಯರು ಇವತ್ತು ಎಂದಿನಂತೆ ಹಿಜಾಬ್ ಧರಿಸಿ ಬಂದಿದ್ದಾರೆ.ಇದನ್ನು‌ ಮೊದಲೇ ಊಹಿಸಿದ್ದ ಇಲಾಖೆಯು ಕಾಲೇಜು ಬಳಿ ಪೊಲೀಸರನ್ನು ನೇಮಿಸಿತ್ತು.

ಗೇಟಿನ ಒಳಗೆ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ತರಾಟೆಗೆ ತೆಗೆದುಕೊಂಡರು.ಕ್ಲಾಸ್ ಗೆ ಅಟೆಂಡ್ ಆಗುವ ಮುನ್ನ ಎಲ್ಲರಂತೆ ಹಿಜಾಬ್ ತೆಗೆದು ಸಮವಸ್ತ್ರದಲ್ಲೇ ಬನ್ನಿ ಎಂದರು .ಈ ವೇಳೆ ವಿದ್ಯಾರ್ಥಿನಿಯರು ಯಥಾಪ್ರಕಾರ ,ವಾಗ್ವಾದಕ್ಕೆ ಇಳಿದರು.

"ನಾವು ಇಷ್ಟರತನಕ ಹಿಜಾಬ್ ಹಾಕಿಯೇ ಬರುತ್ತಿದ್ದೆವು.ಯಾರಿಗೂ ಸಮಸ್ಯೆಯಾಗಿಲ್ಲ.ಈಗ ಸಡನ್ನಾಗಿ ಹಾಕಬೇಡಿ ಅಂತಿದ್ದಾರೆ,ಯಾಕೆ? ನಮಗೆ ಒಂದೂ ಗೊತ್ತಾಗುತ್ತಿಲ್ಲ ಎಂದು ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಅಸಮಾಧಾನ ಹೊರ ಹಾಕಿದರು.

ಇನ್ನೊಂದೆಡೆ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ವಿದ್ಯಾರ್ಥಿಗಳಿಗೆ ಹಿಂದೂ ಸಂಘಟನೆಯವರು ಕೇಸರಿ ಶಾಲು ಹಾಕಿಸಿದ್ದಾರೆ. ಉಳಿದಂತೆ ಅಲ್ಲಿ ವಿದ್ಯಾರ್ಥಿನಿಯರು ದಿನನಿತ್ಯದಂತೆ ಹಿಜಾಬ್ ಕಳಚಿ ಕ್ಲಾಸಿಗೆ ಹಾಜರಾಗಿದ್ದಾರೆ.

ಒಟ್ಟಾರೆ ,ಈ ವಿವಾದ ಇದೀಗ ಇಡೀ ಜಿಲ್ಲೆಗೆ ಹಬ್ಬುತ್ತಿದ್ದು ಮುಂದೇನಾಗುತ್ತೋ ಕಾದು ನೋಡಬೇಕಿದೆ.

Edited By : Manjunath H D
PublicNext

PublicNext

04/02/2022 05:09 pm

Cinque Terre

35.7 K

Cinque Terre

12

ಸಂಬಂಧಿತ ಸುದ್ದಿ