ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಯುಜಿಸಿ ನಿಯಮದನ್ವಯ; ಕೆಎಸ್ಒಯುನಿಂದ ಏಕಕಾಲದಲ್ಲಿ ಎರಡು ಪದವಿ ಪಡೆಯಲು ಅವಕಾಶ

ಯುಜಿಸಿ ನಿಯಮಾವಳಿಯಂತೆ ಕೆಎಸ್ಒಯು ಏಕಕಾಲದಲ್ಲಿ ವಿದ್ಯಾರ್ಥಿಗಳಿಗೆ ಎರಡು ಪದವಿಗಳನ್ನು ಹೊಂದಲು ಅವಕಾಶ ಕಲ್ಪಿಸಿದೆ. ಈ ಮೂಲಕ ವಿದ್ಯಾರ್ಥಿಗಳು ಒಂದು ಪದವಿಯನ್ನು ಭೌತಿಕ ಕ್ರಮದಲ್ಲೂ, ಮತ್ತೊಂದು ಪದವಿಯನ್ನು ದೂರ ಶಿಕ್ಷಣ ಕ್ರಮದಲ್ಲೂ ಪಡೆಯಬಹುದು ಎಂದು ಕೆಎಸ್ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರು ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಕೆಎಸ್ಒಯು ಪ್ರವೇಶಾತಿಯು, ಅಂಕಪಟ್ಟಿ ಡಿಜಿಟಲೀಕರಣಗೊಂಡಿದೆ. ಒಟ್ಟು ಪ್ರವೇಶಾತಿಯನ್ನು ಆನ್ಲೈನ್ ಮೂಲಕವೇ ನಡೆಸಲಾಗುತ್ತದೆ. ಪ್ರಾದೇಶಿಕ ಕೇಂದ್ರಗಳಲ್ಲಿ ತರಗತಿಗಳು ಹಾಗೂ ಪರೀಕ್ಷೆಗಳು ನಡೆಯಲಿದೆ ಎಂದು ಹೇಳಿದರು.

ಕೆಎಸ್ಒಯು ಇದೇ ಮೊದಲ ಬಾರಿಗೆ ಶುಲ್ಕ ಪಾವತಿ ಮಾಡಲು ಇಎಂಐ ಅವಕಾಶವನ್ನು ಕಲ್ಪಿಸಿದೆ. ಅಲ್ಲದೇ ಮೊದಲ ಬಾರಿಗೆ ಆಟೋ ಹಾಗೂ ಕ್ಯಾಬ್ ಚಾಲಕರ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಿದೆ. ಆನ್ಲೈನ್ ಮೂಲಕ ಇ-ಲರ್ನಿಂಗ್ ಸಾಮಗ್ರಿಗಳನ್ನು ಪಡೆಯಲು‌ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತದೆ. ಎಸ್ಸಿ-ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಪ್ರವೇಶಾತಿಯನ್ನು ಕಲ್ಪಿಸಲಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿ ತಂದೆ-ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದು ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.

Edited By :
PublicNext

PublicNext

28/06/2022 12:25 pm

Cinque Terre

60.62 K

Cinque Terre

0

ಸಂಬಂಧಿತ ಸುದ್ದಿ