ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಗ್ರಾಮೀಣ ಪ್ರದೇಶದಲ್ಲಿ ಪಿಸಿಯೋಥೆರಪಿ, ಪೂರಕ ಶಿಕ್ಷಣ ಪಡೆದವರ ಅಗತ್ಯವಿದೆ'

ವಿಕಾಸ್ ಕಾಲೇಜ್ ಆಫ್ ಪಿಸಿಯೋಥೆರಪಿ ಇದರ ಪದವಿ ಕಾಲೇಜು ಹಾಗೂ ಕಾಲೇಜ್ ಆಫ್ ಪಿಸಿಯೋಥೆರಪಿ ಇದರ ವಾರ್ಷಿಕ ಪದವಿ ಪ್ರಧಾನ ಕಾರ್ಯಕ್ರಮ ಶನಿವಾರ ಮಂಗಳೂರಿನಲ್ಲಿ ಜರಗಿತು.

ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಇದರ ಉಪಾಧ್ಯಕ್ಷ ಹಾಗೂ ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಕೆ.ವೆಂಕಟಗಿರಿ ಅವರು ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ನರ್ಸಿಂಗ್ ಹಾಗೂ ಪಿಸಿಯೋಥೆರಪಿ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆಯಿದೆ. ಆರೋಗ್ಯ ಕ್ಷೇತ್ರದಲ್ಲಿ ಎರಡು ಶಿಕ್ಷಣದಿಂದ ಆರ್ಥಿಕವಾಗಿ ಉತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದರು

ಎಂ.ವಿ ಶೆಟ್ಟಿ ಶಿಕ್ಷಣ ಸಂಸ್ಥೆಯ ಡಾ.ಇಫ್ತಿಕಾರ್ ಆಲಿ ಮಾತನಾಡಿ, ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಪ್ರಮುಖ ಜವಾಬ್ದಾರಿ ಇದೆ.ವಿಕಾಸ್ ಸಂಸ್ಥೆಗೆ ಉತ್ತಮ ಹೆಸರಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ ಎಂದು ಹೇಳಿದರು.

ಸಂಸ್ಥೆಯ ಸ್ಥಾಪಕಾರದ ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಅಧ್ಯಕ್ಷತೆ ವಹಿಸಿ, ಗ್ರಾಮೀಣ ಪ್ರದೇಶದಲ್ಲಿ ಪಿಸಿಯೋಥೆರಪಿ ಹಾಗೂ ಪೂರಕ ಶಿಕ್ಷಣ ಪಡೆದವರ ಅಗತ್ಯವಿದೆ. ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶವಿದೆ ಎಂದರು.

ಕಳೆದ 29 ವರ್ಷಗಳಿಂದ ನಮ್ಮ ಟ್ರಸ್ಟ್ ಶಿಕ್ಷಣ ಸೇವಾ ಕಾರ್ಯದಲ್ಲಿ ನಿರತವಾಗಿದೆ. ನಮ್ಮ ಸಂಸ್ಥೆಯ ಉಪನ್ಯಾಸ ಕರು ಬಹಳ ಪರಿಶ್ರಮ ಪಟ್ಟು ಬೆಳೆಸಿದ್ದಾರೆ ಎಂದು ಶ್ಲಾಘಿಸಿದರು.

ಟ್ರಸ್ಟಿಗಳಾದ ಜೆ.ಕೊರಗಪ್ಪ, ಕೃಷ್ಣಾನಂದ ರಾವ್, ಸೂರಜ್ ಕೊಲ್ಯ, ಸಂಸ್ಥೆಯ ಸಿಇಒ ಪಾರ್ಥ ಸಾರಥಿ ಪಾಲೇಮಾರ್, ಪ್ರಾಂಶುಪಾಲರಾದ ಐಶ್ವರ್ಯ ಕೆ.ಡಾ.ಅಜಯ್ ಠಾಕೂರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

27/08/2022 07:06 pm

Cinque Terre

12.21 K

Cinque Terre

0

ಸಂಬಂಧಿತ ಸುದ್ದಿ