ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಪ್ರೌಢಶಾಲಾ ವಾಲಿಬಾಲ್ ಪಂದ್ಯಾಟ; ಶಿಕ್ಷಕರಿಗೆ ಭರ್ಜರಿ ಬಾಡೂಟ, ವಿದ್ಯಾರ್ಥಿಗಳಿಗೆ ಬರೀ ಬಿಸಿಯೂಟ!

ಬೈಂದೂರು: ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಸರ್ಕಾರಿ ಪ್ರೌಢಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದಲ್ಲಿ ಶಾಲೆಯ ಒಳಗೆ ಶಿಕ್ಷಕರು ಭಾರಿ ಬಾಡೂಟದ ಸವಿಯುಂಡರೆ ವಿದ್ಯಾರ್ಥಿಗಳಿಗೆ ಮಾತ್ರ ಮಾಮೂಲಿ ಬಿಸಿಯೂಟ ನೀಡುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದು ಸ್ಪರ್ಧೆಗೆ ಆಗಮಿಸಿದ ವಿವಿಧ ಶಾಲಾ ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ.

ವಿದ್ಯಾರ್ಥಿಗಳ ಹೆಸರಲ್ಲಿ ನಿಯಮ ಮೀರಿ ಶಾಲಾ ಕೊಠಡಿಯೊಳಗೆ ಚಿಕನ್ ಕಬಾಬ್, ಕುಂದಾಪ್ರ ಚಿಕನ್, ಕೊಟ್ಟೆ ಕಡುಬು, ಪ್ರಾನ್ಸ್ ಸಾರು, ಮೀನು ಮಸಾಲಾ ಹೀಗೆ ಭಿಕ್ಷೆ ಎತ್ತಿದ ಹಣದಲ್ಲಿ ಮೋಜು ಮಸ್ತಿ ಮಾಡಿರುವ ಶಿಕ್ಷಕರು‌, ಬಡಪಾಯಿ ವಿದ್ಯಾರ್ಥಿಗಳ ಬಗ್ಗೆ ಮಾತ್ರ ಅಸಡ್ಡೆ ಭಾವನೆ ತೋರಿ ತಾರತಮ್ಯ ನಡೆಸಿದ್ದಾರೆ ಎಂಬ ಆರೋಪ‌ ಭುಗಿಲೆದ್ದಿದೆ.

ಒಟ್ಟು ಕಾರ್ಯಕ್ರಮಕ್ಕೆ 80 ಸಾವಿರ ರೂ. ಬಜೆಟ್ ಮಾಡಲಾಗಿದ್ದು, ಸಾರ್ವಜನಿಕರಿಂದ ಸುಮಾರು ಮೂರುವರೆ ಲಕ್ಷ ರೂ. ಡೊನೇಷನ್ ಪಡೆಯಲಾಗಿದೆ. ಕೆಲವರಿಗೆ ರಶೀತಿಯನ್ನೂ ನೀಡದೆ ವಂಚಿಸಲಾಗಿದ್ದು, ಭಾರಿ ಅವ್ಯವಹಾರ ನಡೆದಿದೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. ಈ ಬಗ್ಗೆ ಶಿಕ್ಷಣ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

14/09/2022 08:43 pm

Cinque Terre

5.48 K

Cinque Terre

2

ಸಂಬಂಧಿತ ಸುದ್ದಿ