ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದಸರಾಗೆ ಸೆ.26ರಿಂದ ಅ.10ರವರೆಗೆ ಶಾಲಾ- ಕಾಲೇಜುಗಳಿಗೆ ರಜೆ ನೀಡುವಂತೆ ಡಿಸಿಗೆ ಶಿಕ್ಷಣ ಸಚಿವರಿಂದ ಪತ್ರ

ಮಂಗಳೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ಸೆ.26ರಿಂದ ಅ.10ರವರೆಗೆ ರಜೆ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ದ.ಕ.ಜಿಲ್ಲಾಧಿಕಾರಿಯರಿಗೆ ಸೂಚನೆ ನೀಡಿದ್ದಾರೆ.

ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ದಸರಾ ರಜೆಯನ್ನು ನವರಾತ್ರಿ ಹಬ್ಬಕ್ಕೆ ಪೂರಕವಾಗುವಂತೆ ನೀಡಲು ಮನವಿ ಬಂದಿದೆ. ಅದರಂತೆ ದಸರಾ ರಜೆಯನ್ನು ಜಿಲ್ಲೆಯಲ್ಲಿ ಸೆ.26 ರಿಂದ ಅ.10ರವರೆಗೆ ನೀಡಲು ಕೋರಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಸರಿದೂಗಿಸಿ ಅ.2ರ ಮಹಾತ್ಮಾ ಗಾಂಧಿ ಜಯಂತಿಯನ್ನು ಆಚರಣೆ ಮಾಡುವ ಷರತ್ತಿನ ಮೇರೆಗೆ ಸೆ.26ರಿಂದ ಅ.10ರವರೆಗೆ ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ರಜೆ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ದ.ಕ.ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.

Edited By : Vijay Kumar
Kshetra Samachara

Kshetra Samachara

13/09/2022 09:45 am

Cinque Terre

6.51 K

Cinque Terre

0

ಸಂಬಂಧಿತ ಸುದ್ದಿ