ಬ್ರಹ್ಮಾವರ: ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಬ್ರಹ್ಮಾವರ ರೋಟರಿ, ಲಯನ್ಸ್ ಇನ್ನಿತರ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರುಗಿದ ಗಾಂಧಿ ಫೆಕ್ಸ್ 2022 ಕಾರ್ಯಕ್ರಮದಲ್ಲಿ ಡೇನಿಯಲ್ ಮೊಂತೆರೋ ಅವರ ಸಂಗ್ರಹದ 120 ದೇಶಗಳ 1000ಕ್ಕೂ ಹೆಚ್ಚು ಅಂಚೆ ಚೀಟಿಗಳ ಪ್ರದರ್ಶನವನ್ನು ನಿವೃತ್ತ ಅಂಚೆ ಸೇವೆ ಮಂಡಳಿ ದೆಹಲಿಯ ಡಾ, ಮಂಗಳೂರಿನ ಚಾರ್ಸ್ ಲೋಬೊ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ ದೇಶದ ಸ್ವಾತಂತ್ರ್ಯದ 75ನೇ ವರ್ಷದ ಸಮಯದಲ್ಲಿ ಗಾಂಧಿಯವರನ್ನು ಮರೆ ಮಾಚಿ ಯಾರ್ಯಾರೋ ಸ್ವಾತಂತ್ರ್ಯ ವೀರರಾಗುತ್ತಿರುವ ಕಾಲ ಘಟ್ಟದಲ್ಲಿ ಗಾಂಧಿಯವರ ಕುರಿತ ಅಂಚೆ ಚೀಟಿ ಪ್ರದರ್ಶನ ಸಕಾಲಿಕವಾಗಿದೆ ಎಂದರು.
ನಿವೃತ್ತ ಪ್ರಿನ್ಸಿಪಾಲ್ ಡಾ ಬಿ .ಜಗದೀಶ್ ಶೆಟ್ಟಿ, ಕಾಲೇಜಿನ ಪ್ರಿನ್ಸಿಪಾಲ್ ಐವನ್ ಡೋನಾತ್ ಸುವಾರಿಸ್, ರೋಟರಿಯ ದಿನೇಶ್ ನಾಯರಿ, ಜಯರಾಮ ಹೆಗ್ಡೆ ಕಾಲೇಜಿನ ಆಡಳಿತ ಮಂಡಳಿಯವರು ಹಾಜರಿದ್ದರು. ಬಳಿಕ ನಾನಾ ಭಾಗದಿಂದ ಬಂದ ವಿದ್ಯಾರ್ಥಿಗಳು ಸಾರ್ವಜನಿಕರು ಅಂಚೆ ಚೀಟಿ ಪ್ರದರ್ಶನ ವೀಕ್ಷಿಸಿದರು.
ಶಿವರಾಮ ಬ್ರಹ್ಮಾವರ
PublicNext
23/08/2022 01:45 pm