ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಉಕ್ರೇನ್‌ನಿಂದ ಸುರುಕ್ಷಿತವಾಗಿ ಮರಳಿದ ನಾವುಂದ ವಿದ್ಯಾರ್ಥಿನಿ ಅಂಕಿತಾ ಜಗದೀಶ್

ಬೈಂದೂರು: ಉಕ್ರೇನ್ ದೇಶದ ಕಾರ್ಕಿವ್ ನಗರದ ವಿಎನ್ ಕರ್ಜನ್ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನಾವುಂದ ಸಮೀಪದ ಮಸ್ಕಿಯ ವಿದ್ಯಾರ್ಥಿನಿ ಅಂಕಿತಾ ಜಗದೀಶ್ ಪೂಜಾರಿ ಗುರುವಾರ ರಾತ್ರಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದು ತಲುಪಿದ್ದಾರೆ.

ಹಕ್ಕಾಡಿ ಜಗದೀಶ ಪೂಜಾರಿ ಹಾಗೂ ಜ್ಯೋತಿ ಪೂಜಾರಿ ಅವರ ಪುತ್ರಿ. ಅಂಕಿತಾ ಜಗದೀಶ್ ಪೂಜಾರಿ ಕೆಲ ತಿಂಗಳ ಹಿಂದೆ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ತೆರಳಿದ್ದರು. ಯುದ್ಧ ಆರಂಭವಾದ ಬಳಿಕ ಹಾಸ್ಟೇಲಿನ ಕೆಳಭಾಗದ ಬಂಕರ್‌ಗಳಲ್ಲಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿರಲು ಅವಕಾಶ ಮಾಡಿಕೊಟ್ಟು ಊಟ ಉಪಚಾರಗಳಿಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿತ್ತು. ಬುಧುವಾರ ಬೆಳಿಗ್ಗೆ 10:30ಕ್ಕೆ (ಭಾರತೀಯ ಸಮಯ ಮಧ್ಯಾಹ್ನ 1:30)ರ ಕಾರ್ಕಿವ್ ನಿಂದ ರೈಲಿನಲ್ಲಿ ಹೊರಟ ವಿದ್ಯಾರ್ಥಿಗಳ ತಂಡ ಸಂಜೆ 6:30ಕ್ಕೆ ಪೋಲ್ಯಾಂಡ್ ದೇಶವನ್ನು ತಲುಪಿತ್ತು. ಬಳಿಕ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಬಂದಿಳಿದ ಅಂಕಿತ ಜಗದೀಶ್ ಪೂಜಾರಿ ಅವರನ್ನು ಎನ್ .ಕೆ ಬಿಲ್ಲವ ಹಾಗೂ ಶುಭೋದ ಎನ್ ಕೆ ಬಿಲ್ಲವ ಬರಮಾಡಿಕೊಂಡರು.

Edited By : Vijay Kumar
Kshetra Samachara

Kshetra Samachara

05/03/2022 11:37 am

Cinque Terre

4.57 K

Cinque Terre

0

ಸಂಬಂಧಿತ ಸುದ್ದಿ