ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮಕ್ಕಳಲ್ಲಿ ಕಲಾಸಕ್ತಿ ಬೆಳೆಸಲು ನೆರವಾದ ಕುಟೀರ ಶಾಲೆ ಉದ್ಘಾಟನೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟೀನಹೊಳೆ ಬೈಂದೂರು ವಲಯದಲ್ಲಿ ಪ್ರಪ್ರಥಮ ಬಾರಿಗೆ ಮಕ್ಕಳ ಸೃಜನಶೀಲತೆ ಹೆಚ್ಚಿಸಲು ಸಜ್ಜುಗೊಳಿಸಲಾದ ನಲಂದಾ ಕುಟೀರ ಶಾಲೆ ಇಂದು ಉದ್ಘಾಟನೆಗೊಂಡಿದೆ.

ಇಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿ ವಿವಿಧ ಚಟುವಟಿಕೆಗಳಾದ ನೃತ್ಯ, ನಾಟಕ, ಕ್ರಾಫ್ಟ್, ಇನ್ನಿತರ ಕಲೆಗಳನ್ನು ಕಲಿಯಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿಯವರು ನೂತನ ಕುಟೀರ ಶಾಲೆಯನ್ನು ಉದ್ಘಾಟಿಸಿದ್ರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೇತ್ರಾವತಿ ಆಚಾರ್ಯ ಸಭಾಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಾಲಾ ಅಭಿವೃದ್ಧಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಉದ್ಯಮಿಗಳಾದ ಶ್ರೀ ಜಯಶೀಲ ಶೆಟ್ಟಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಮಂಜುನಾಥ್ ದೇವಾಡಿಗ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸೀತರಾಮ್ ಕುಲಾಲ್, ನಾರಾಯಣ ರಾಜು ಸುರೇಶ್ ಕುಲಾಲ್ ಪರಮನೆ , SDMC ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಮಕ್ಕಳ ಪೋಷಕರು, ಹಳೆಯ ವಿದ್ಯಾರ್ಥಿಗಳು ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

01/09/2022 06:45 pm

Cinque Terre

6.69 K

Cinque Terre

0

ಸಂಬಂಧಿತ ಸುದ್ದಿ