ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: 'ಹತ್ತನೇ ತರಗತಿಯಲ್ಲೇ ನಾರಾಯಣಗುರು ಪಠ್ಯ ಸೇರಿಸಿ, ಇಲ್ಲವಾದರೆ ಹೋರಾಟ ಎದುರಿಸಿ'

ಬ್ರಹ್ಮಶ್ರೀ ನಾರಾಯಣಗುರುಗಳ ಉಲ್ಲೇಖವಿರುವ ಪಠ್ಯಭಾಗವನ್ನು ಹತ್ತನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಟ್ಟಿರುವ ಕ್ರಮವನ್ನು ಬಿಲ್ಲವ ಆರ್ಯ ಈಡಿಗ ಮಹಾಸಂಸ್ಥಾನದ ಬಂಟ್ವಾಳ ತಾಲೂಕು ಘಟಕ ಬಲವಾಗಿ ಖಂಡಿಸಿದ್ದು, ಬಿಲ್ಲವ ಸಮಾಜದ ಸಚಿವರು ಈ ಕುರಿತು ಪಠ್ಯದಲ್ಲಿ ಮರುಸೇರ್ಪಡೆ ಮಾಡಿಸದೇ ಇದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

ಬಂಟ್ವಾಳ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಘಟಕಾಧ್ಯಕ್ಷ ಬೇಬಿ ಕುಂದರ್, ಮೇಲ್ವರ್ಗದ ಸ್ವಾಮೀಜಿಗಳ ಹೋರಾಟ ಮತ್ತು ಎಚ್ಚರಿಕೆಗೆ ತಲೆಬಾಗಿ ಕರ್ನಾಟಕ ಸರ್ಕಾರ ಲೋಪದೋಷಗಳನ್ನು ಸರಿಪಡಿಸಿದ್ದರೆ, ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯಭಾಗವನ್ನು ಹಾಗೆಯೇ ಬಿಟ್ಟಿದೆ.

ಗುರುಗಳ ಜೀವನ ಚರಿತ್ರೆಯನ್ನು ಎಲ್ಲಾ ವರ್ಗದ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾಗಿದ್ದರೆ, ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಕಿತ್ತು ಐಚ್ಛಿಕವಾದ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಿ ಈ ಸಮಾಜದ ಕಣ್ಣೊರೆಸುವ ತಂತ್ರ ಮಾಡಿದ್ದು ಇದನ್ನು ಯಾವತ್ತಿಗೂ ಈ ಸಮಾಜ ಒಪ್ಪುವುದಿಲ್ಲ ಇದನ್ನು ಮರು ಪರಿಶೀಲನೆ ಮಾಡಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿಯೇ ಗುರುಗಳ ಜೀವನ ಚರಿತ್ರೆಯನ್ನು ಸೇರ್ಪಡೆ ಮಾಡುವಂತೆ ಒತ್ತಾಯಿಸುತ್ತೇವೆ ಎಂದರು.

ಬಿಲ್ಲವ ಈಡಿಗ ನಾಮಧಾರಿಯಾಗಿ 26 ಪಂಗಡಗಳನ್ನು ಒಟ್ಟುಗೂಡಿಸಿ ಇದರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ನಮ್ಮ ಸಮಾಜದ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಜವಾಬ್ದಾರಿ ಸ್ಥಾನದಲ್ಲಿದ್ದು ಮೌನವಾಗಿರುವುದು ಸಂಶಯಕ್ಕೆ ಎಡೆ ಮಾಡಿದಂತಾಗಿದೆ. ಅವರಿಗೆ ಇದರ ವಿರುದ್ಧ ಧ್ವನಿ ಎತ್ತಲು ಅಸಾಧ್ಯವಾದಲ್ಲಿ ಕೂಡಲೇ ಶಾಸಕರ ಮತ್ತು ಸಚಿವ ಸಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.

Edited By :
Kshetra Samachara

Kshetra Samachara

23/06/2022 06:59 pm

Cinque Terre

22.28 K

Cinque Terre

1

ಸಂಬಂಧಿತ ಸುದ್ದಿ