ಉಡುಪಿ: ಉಕ್ರೇನ್ ನಲ್ಲಿ ಸಿಲುಕಿದ್ದ ಕೊನೆಯ ವಿದ್ಯಾರ್ಥಿ ವಾಪಸ್: ಜಿಲ್ಲೆಯ ಎಲ್ಲರೂ ಮರಳಿ ಮನೆಗೆ
ಕೆಮ್ಮಣ್ಣು: ಉಕ್ರೇನ್ ನ ಯುದ್ಧಪೀಡಿತ ಪ್ರದೇಶವಾದ ಖಾರ್ಕೀವ್ ನಿಂದ ಉಡುಪಿಯ ಕೆಮ್ಮಣ್ಣುವಿನ ಗ್ಲೆನ್ವಿಲ್ ಮ್ಯಾಕ್ಲಿನ್ ಫೆರ್ನಾಂಡೀಸ್ ಉಡುಪಿಯ ಕೆಮ್ಮಣ್ಣುವಿನ ಮನೆಗೆ ವಾಪಾಸಾಗಿದ್ದಾರೆ.ಇದರೊಂದಿಗೆ ಉಡುಪಿಯ ಎಲ್ಲ ವಿದ್ಯಾರ್ಥಿಗಳೂ ಉಕ್ರೇನ್ ನಿಂದ ವಾಪಾಸಾದಂತಾಗಿದೆ.
ತಾಯ್ನಾಡಿಗೆ ಮರಳಿರುವ ಗ್ಲೆನ್ವಿಲ್ ಮ್ಯಾಕ್ಲಿನ್ ಫೆರ್ನಾಂಡೀಸ್, ಕ್ಷಿಪಣಿ ದಾಳಿಯನ್ನು ಕಣ್ಣಾರೆ ಕಂಡ ಅನುಭವವನ್ನು ಬಿಚ್ಚಿಟ್ಟಿದ್ದಾರೆ.ಇದೇ ವೇಳೆ ಮಗನನ್ನು ಸುರಕ್ಷಿತವಾಗಿ ಕರೆತಂದ ಕೇಂದ್ರ ಸರಕಾರಕ್ಕೆ, ರಾಜ್ಯ ಸರಕಾರಕ್ಕೆ ವಿದ್ಯಾರ್ಥಿಯ ಪೋಷಕರು ಧನ್ಯವಾದ ಹೇಳಿದ್ದಾರೆ.
Kshetra Samachara
12/03/2022 01:49 pm