ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೊರೊನಾ ಲಾಕ್ ಡೌನ್ ನಂತರ ಕಾಲೇಜು ಆರಂಭ; ಹೆಚ್ಚಿನ ವಿದ್ಯಾರ್ಥಿಗಳು ಗೈರು

ಮಂಗಳೂರು: ಮಂಗಳೂರು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳು ಇಂದು ಆರಂಭಗೊಂಡಿದೆ. ಕೊರೊನಾ ಲಾಕ್ ಡೌನ್ ನ 8 ತಿಂಗಳ ನಂತರ ಕಾಲೇಜು ಬಾಗಿಲು ತೆರೆದಿದ್ದು, ವಿದ್ಯಾರ್ಥಿಗಳು ಕೋವಿಡ್ ಪ್ರಮಾಣ ಪತ್ರ ಹಾಗೂ ಪೋಷಕರ ಮುಚ್ಚಳಿಕೆ ಪತ್ರದ ಜೊತೆಗೆ ಆಗಮಿಸಿದ್ದಾರೆ. ಇನ್ನೂ ಹಲವು ವಿದ್ಯಾರ್ಥಿಗಳಿಗೆ ಕೋವಿಡ್ ಪ್ರಮಾಣ ಪತ್ರ ಸಿಗದ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ. ನೆಗೆಟಿವ್ ವರದಿ ಜೊತೆ ಹಾಜರಾದ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ತರಗತಿಗೆ ಹಾಜರಾಗಿದ್ದಾರೆ.

ಸರಕಾರದ ಮಾರ್ಗಸೂಚಿಯಂತೆ ಒಂದು ಬೆಂಚ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು (ಶೇ.50) ಮಾತ್ರ ಆಸೀನರಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕಾಲೇಜು ಕ್ಯಾಂಪಸ್ ಪ್ರವೇಶ ದ್ವಾರದಲ್ಲೇ ಹ್ಯಾಂಡ್ ಸ್ಯಾನಿಟೈಸರ್ ಇಡಲಾಗಿದೆ.‌ ಅಲ್ಲದೆ ಉಪ್ಯಾಸಕರು, ಕಾಲೇಜು ಸಿಬ್ಬಂದಿ ಕಡ್ಡಾಯ ಮಾಸ್ಕ್, ಫೇಸ್ ಶೀಲ್ಡ್ ಧರಿಸಿ ಆಗಮಿಸಿದ್ದಾರೆ. ಆದರೆ ಹಾಜರಾತಿ ಕಡಿಮೆ ಇದ್ದುದ್ದರಿಂದ ಹೆಚ್ಚಿನ ಪಾಠ ಪ್ರವಚನ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧ್ಯವಾಗಿಲ್ಲ.

Edited By : Manjunath H D
Kshetra Samachara

Kshetra Samachara

17/11/2020 12:06 pm

Cinque Terre

24.54 K

Cinque Terre

1

ಸಂಬಂಧಿತ ಸುದ್ದಿ