ಮುಲ್ಕಿ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಹಾಗೂ ಪ್ರವರ್ತನ ಯೋಜನೆ ಮತ್ತು ಅತಿಕಾರಿಬೆಟ್ಟು ಗ್ರಾಪಂ ಸಹಕಾರದಲ್ಲಿ ಅತಿಕಾರಿಬೆಟ್ಟು ಗ್ರಾಪಂ ಸಭಾಭವನದಲ್ಲಿ ಹದಿಹರೆಯದ ಮಕ್ಕಳಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕ ವಿಲಿಯಂ ಸ್ಯಾಮ್ಯುಯೆಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿ ಅತಿಕಾರಿಬೆಟ್ಟು ಪಿಡಿಒ ರವಿ ಮಾತನಾಡಿ, ಕೊರೊನಾ ದಿನಗಳಲ್ಲಿ ಮಕ್ಕಳು ಜಾಗೃತರಾಗಿರುವುದೆ ಅಲ್ಲದೆ, ದುಶ್ಚಟ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಜ್ಞಾ ಸಲಹಾ ಕೇಂದ್ರದ ಅಮಲು ಚಿಕಿತ್ಸಾಲಯ ಯೋಜನಾ ಸಂಯೋಜಕ ಆನಂದ್ ಅತ್ತಾವರ , ಆಪ್ತ ಸಮಾಲೋಚಕ ಆನಂದ್ ಕುಂದರ್ ಹದಿಹರೆಯದ ವಯಸ್ಕರ ಜಾಗೃತಿ ಮಾಹಿತಿ ನೀಡಿದರು.
ಕೊಲ್ಲೂರು ಆಯುಷ್ ಕೇಂದ್ರ ವೈದ್ಯಾಧಿಕಾರಿ ಶೋಭಾ ರಾಣಿ , ಸಿಬ್ಬಂದಿ ಪ್ರಣೀಕ್ ಮಕ್ಕಳಿಗೆ ಯೋಗಾಸನ ತರಬೇತಿ ಶಿಬಿರ ನಡೆಸಿಕೊಟ್ಟರು. ಪ್ರಜ್ಞಾ ಸಲಹಾ ಕೇಂದ್ರ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು, ಹದಿಹರೆಯದ ಮಕ್ಕಳು ಉಪಸ್ಥಿತರಿದ್ದರು.
Kshetra Samachara
24/11/2020 09:32 am