ಮುಲ್ಕಿ: ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ ( ಸ.ಅ.) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಮೀಲಾದುನ್ನಬಿ ಆಚರಣೆ ಭಾನುವಾರ ನಡೆಯಿತು.
ಹಳೆಯಂಗಡಿ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ಲಾ ಝೈನಿ ಬಡಗನ್ನೂರು, ಸಾಗ್ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ, ಸಂತಕಟ್ಟೆ ಜುಮಾ ಮಸೀದಿಯ ಖತೀಬ್ ಕೆ.ಎಂ. ಅಬೂಬಕರ್ ಮದನಿ, ಇಂದಿರಾ ನಗರ ಮಸೀದಿಯ ಸದರ್ ಮುಅಲ್ಲಿಮ್ ಇಮ್ರಾನ್ ಮಖ್ದೂಮಿ, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಸಾಗ್, ಉಪಾಧ್ಯಕ್ಷ ಬಶೀರ್ ಕಲ್ಲಾಪು, ಕಾರ್ಯದರ್ಶಿ ಎಚ್.ಕೆ. ಮುಹಮ್ಮದ್, ಸಾಗ್ ಜುಮಾ ಮಸೀದಿ ಉಪಾಧ್ಯಕ್ಷ ಮುಸ್ತಫಾ ಸಾಗ್, ಕಾರ್ಯದರ್ಶಿ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಸಂತಕಟ್ಟೆ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್, ಕಾರ್ಯದರ್ಶಿ ಇಲ್ಯಾಸ್ ಕಜಕತೋಟ, ಹಳೆಯಂಗಡಿ ವಲಯ ಮುಸ್ಲಿಂ ಜಮಾತ್ ಒಕ್ಕೂಟದ ಅಧ್ಯಕ್ಷ ಸಾಹುಲ್ ಹಮೀದ್ ಕದಿಕೆ, ಇಬ್ರಾಹೀಂ ಇಂದಿರಾ ನಗರ, ಖಾದರ್ ಸಾಗ್ ಉಪಸ್ಥಿತರಿದ್ದರು.
Kshetra Samachara
09/10/2022 02:53 pm