ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ಸೌಹಾರ್ದತೆಯ ಜೀವನವನ್ನು ನಡೆಸಲು ಯುವ ಜನಾಂಗ ಮುಂದಾಗಬೇಕು"

ಮುಲ್ಕಿ: ಶಾಫೀ ಜುಮ್ಮಾ ಮಸ್ಜಿತ್ ಜಮಾತ್ ವತಿಯಿಂದ ಈದ್ ಮಿಲಾದ್ ಸಮಾರೋಪ ಕಾರ್ಯಕ್ರಮ ಕೇಂದ್ರ ಜುಮ್ಮಾ ಮಸೀದಿಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮುಲ್ಕಿ ಕೇಂದ್ರ ಜುಮ್ಮಾ ಮಸ್ಜಿತ್ ಜಮಾತ್ ಖತೀಬರಾದ ಸಲೀಂ ಫೈಝಿ ಇರ್ಫಾನಿ ವಹಿಸಿ ಆಶೀರ್ವಚನ ನೀಡಿ ಪ್ರವಾದಿ ಮೊಹಮ್ಮದ್ ಪೈಗಂಬರರ ಸ್ನೇಹ, ಸಹ ಬಾಳ್ವೆ ಆದರ್ಶಗಳನ್ನು ಪಾಲಿಸುವ ಮುಖಾಂತರ ಸೌಹಾರ್ದತೆಯ ಜೀವನವನ್ನು ನಡೆಸಲು ಯುವ ಜನಾಂಗ ಮುಂದಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ಶಾಫಿ ಜುಮ್ಮಾ ಮಸ್ಜಿತ್ ಜಮಾತ್ ಅಧ್ಯಕ್ಷರಾದ ಬಿ ಎಂ ಲಿಯಾಖತ್ ಆಲಿ, ಗೌರವಾಧ್ಯಕ್ಷ ಇನಾಯತ್ ಅಲಿ, ಕಾರ್ನಾಡ್ ಮಸೀದಿಯ ಖತೀಬರಾದ ಇಸ್ಮಾಯಿಲ್ ದಾರಿಮಿ, ಕೋಶಾಧಿಕಾರಿ ಇಕ್ಬಾಲ್ ಅಹಮದ್, ಮುಲ್ಕಿ ನ ಪಂ ಸದಸ್ಯ ಪುತ್ತುಭಾವ, ನಸರ್ ತುಲ್ ಮಸಾಕೀನ್ ಅಧ್ಯಕ್ಷ ಅಮಾನುಲ್ಲಾ, ಕಾರ್ನಾಡ್ ಹಿಮಾಯತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ ಕೆ ಇಬ್ರಾಹಿಂ, ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ರಿಯಾಜ್ ಮೋಯ್ದಿನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಸಿದ್ದಿಕ್ ಫೈಝಿ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

09/10/2022 09:55 am

Cinque Terre

5.39 K

Cinque Terre

0

ಸಂಬಂಧಿತ ಸುದ್ದಿ