ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಲೂರು: ದಸರಾಗೆ ವಿಶೇಷ ಕಳೆ ತಂದ ವೇಷಧಾರಿಗಳು: ದೇವಿ ಸಮಕ್ಷಮ ಹುಲಿಗಳ ಕಲರವ !

ಕೊಲ್ಲೂರು: ದಕ್ಷಿಣದ ಪ್ರಸಿದ್ಧ ದೇವಿ ದೇವಸ್ಥಾನದಲ್ಲಿ ಇವತ್ತು ವಿಜಯದಶಮಿ ಸಡಗರ. ಹಬ್ಬದ ಸಂಭ್ರಮದಲ್ಲಿದ್ದ ಕೊಲ್ಲೂರು ಶ್ರೀ ಮೂಕಾಂಬಿಕೆಯ ಸಮಕ್ಷಮ ನಡೆದ ಹುಲಿಕುಣಿತ ಹಬ್ಬಕ್ಕೆ ವಿಶೇಷ ರಂಗು ತುಂಬಿತು.ದೇವಳದ ಪ್ರಾಂಗಣಕ್ಕೆ ನುಗ್ಗಿದ ಹತ್ತಾರು ಹುಲಿವೇಷಧಾರಿಗಳು ನೃತ್ಯ ಮಾಡಿ ನೆರೆದ ಭಕ್ತರನ್ನು ರಂಜಿಸಿದವು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಹುಲಿ ನೃತ್ಯ ಕಡಿಮೆಯೇ. ಆದರೆ ಈ ಬಾರಿ ಭಕ್ತರ ಆಕರ್ಷಣೆಗಾಗಿ ವಿಶೇಷ ಹುಲಿ ವೇಷ ನೃತ್ಯ ವನ್ಬು ಆಯೋಜಿಸಲಾಗಿತ್ತು.ವಿದ್ಯಾರಂಭ ಸಂಪ್ರದಾಯದ ಬಳಿಕ ಆರಂಭಗೊಂಡ ಹುಲಿವೇಷಧಾರಿಗಳ ನೃತ್ಯಕ್ಕೆ ರಾಜ್ಯ ಹೊರ ರಾಜ್ಯದ ಭಕ್ತರು ತಲೆದೂಗಿದರು.ಸುಮಾರು ಒಂದು ತಾಸು ನಡೆದ ಹುಲಿಕುಣಿತಕ್ಕೆ ಹೊರರಾಜ್ಯದ ಭಕ್ತರು ರೋಮಾಂಚನಗೊಂಡರು.

Edited By : Nagesh Gaonkar
PublicNext

PublicNext

05/10/2022 10:39 pm

Cinque Terre

48.13 K

Cinque Terre

0

ಸಂಬಂಧಿತ ಸುದ್ದಿ