ಕಾಪು: ಮಾಜಿ ಸಚಿವ ಕುಮಾರ್ ಸೊರಕೆ ನೇತೃತ್ವದಲ್ಲಿ ಶರನ್ನವರಾತ್ರಿ ಮತ್ತು ದಸರಾ ಸಂಭ್ರಮಾಚರಣೆಯ ಪ್ರಯುಕ್ತ ರಕ್ಷಣಾಪುರ ಜವನೆರ್ನ ಕೂಟದ ವತಿಯಿಂದ ಕಾಪು ಜನಾರ್ಧನ ದೇವಸ್ಥಾನದ ಬಳಿಯ ಮೈದಾನಲ್ಲಿ ಜರುಗಿದ ಹುಲಿ ವೇಷ ಸ್ಪರ್ಧೆ- 2022 ಕಾಪು ಪಿಲಿ ಪರ್ಬ ನೆರವೇರಿತು.
ಹುಲಿ ಕುಣಿತದ ಹೆಸರು ನೋಂದಾಯಿಸಿದ್ದ ಹತ್ತು ತಂಡಗಳಲ್ಲಿ ಒಂಭತ್ತು ತಂಡಗಳು ಇಪ್ಪತ್ತು ನಿಮಿಷಗಳ ಕಾಲವಧಿಯಲ್ಲಿ ತಮ್ಮ ಕುಣಿತದ ಜೊತೆಗೆ ಮುಡಿ ಎತ್ತುವಿಕೆ ಇತ್ಯಾದಿ ಪ್ರಕಾರಗಳ ಪ್ರದರ್ಶನ ನೀಡಿತು. ಈ ಸಂದರ್ಭ ಕ್ಷೇತ್ರಗಳಲ್ಲಿ ಸಾಧನೆ ಗೈದವರನ್ನುಗೌರವಿಸಲಾಯಿತು.
ಪ್ರಥಮ ಬಹುಮಾನ ಒಂದು ಲಕ್ಷ ನಗದು ಜೊತೆಗೆ ಟ್ರೋಫಿಯನ್ನು ಅಶೋಕ್ ರಾಜ್ ಕಾಡಬೆಟ್ಟು ತಂಡವು ಪಡೆಯಿತು. ದ್ವಿತೀಯ ಬಹುಮಾನವನ್ನು ಐವತ್ತು ಸಾವಿರ ನಗದು ಟ್ರೋಫಿಯೊಂದಿಗೆ ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡವು ಪಡೆಯಿತು. ಮುಡಿ ಎತ್ತುವಿಕೆ : ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡ ಕಿನ್ನಿ ಪಿಲಿ : ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ತಂಡ ವಿಶೇಷ ಕಪ್ಪು ಹುಲಿ : ಕಿಂಗ್ ಟೈಗರ್ ಕಾಪು ತಂಡ ಅತ್ಯುತ್ತಮ ಹುಲಿ ಕುಣಿತ ತಂಡ : ಅಶೋಕ್ ರಾಜ್ ಕಾಡಬೆಟ್ಟು ತಂಡ ಪಡೆದುಕೊಂಡಿತು. ಭಾಗವಹಿಸಿದ ತಂಡಕ್ಕೆ ನಗದು ಪ್ರೋತ್ಸಾಹಕರ ಗೌರವ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಶೆಟ್ಟಿ, ನವೀನ್ ಶೆಟ್ಟಿ,ದೇವಿಪ್ರಸಾದ್ ಶೆಟ್ಟಿ , ಶಶರ್ಫುದ್ಧೀನ್, ರಮೀಜ್ ಹುಸೇನ್, ಹರೀಶ್ ನಾಯಕ್, ಅಮೀರುದ್ದಿನ್ ಮತ್ತಿತರರು ಉಪಸ್ಥಿತರಿದ್ದರು.
PublicNext
05/10/2022 07:46 pm